ಕಲಬುರಗಿ: ನಗರದಲ್ಲಿ ಹೆಚ್ಚುತ್ತಿರುವ ಅನ್ಯಕೋಮಿನ ಯುವಕರ ನೈತಿಕ ಪೊಲೀಸ್‍ಗಿರಿ ತಡೆಗಟ್ಟಿ ಅಂಥವರ ವಿರುದ್ಧ ರೌಡಿಶೀಟ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿಹಿಂದೂ ಜಾಗೃತಿ ಸೇನೆಯಿಂದ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ,ಸಂತೋಷ ಸೋನಾವಣೆ,ಸಿದ್ದು ಕಂದಗಲ್,ರಾಜು ವಾಘ್ಮಾರೆ,ಚಿದಾನಂದ ಮಠಪತಿ,ಗುರುರಾಜ ಹಿರೇಮಠ,ಗಣೇಶ ಗೈಯಾಳಿ,ಉದಯ ಸುಲ್ತಾನಪುರ,ಕೇದಾರನಾಥ ಕಂತಿ,ಆನಂದ ದೇಸಾಯಿ,ಮಹೇಶ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.