ಹುಬ್ಬಳ್ಳಿಯ ಬೆಂಗೇರಿ ಗ್ರಾಮದೇವತಾ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೂವಪ್ಪ ದಾಯಗೋಡಿ, ಗುರುಸಿದ್ದಪ್ಪ ಕುಂದಗೋಳ, ಕಲ್ಲಪ್ಪ ಕಂಡೇಕರ್, ಅಡಿವೆಪ್ಪ ಹೊಸಮನಿ ಉಪಸ್ಥಿತರಿದ್ದರು.