ಕಲಬುರಗಿ: ಮುಖಚರ್ಯೆ ಗುರುತಿಸುವ ಕ್ರಮ ( ಎಫ್‍ಆರ್‍ಎಸ್ ) ನಿಲ್ಲಿಸಲು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಕಪ್ಪು ದಿನ ಆಚರಿಸಿ ಭಾರತೀಯ ಅಂಚೆ ಇಲಾಖೆಯ ಸಬ್ ರೆಕಾರ್ಡ ಕಚೇರಿ ಮುಂದೆ ಧರಣಿ ಕೈಗೊಂಡು ಮನವಿಪತ್ರ ಚಳುವಳಿ ನಡೆಸಲಾಯಿತು.ಅಧ್ಯಕ್ಷೆ ಗೌರಮ್ಮ ಪಾಟೀಲ, ಕಾರ್ಯದರ್ಶಿ ಮಂಜುಳಾ ಬಿ,ಕವಿತಾ,ಅಂಜನಾ,ಗೊರಿಬಿ,ಇಂದುಮತಿ,ರೇಖಾ,ರೂಬಿನಾ,ಲತಾ,ಪ್ರಿಯಾಂಕಾ,ಸುಧಾ ಸೇರಿದಂತೆ ಹಲವರು ಪಾಲ್ಗೊಂಡರು.