
ಕಲಬುರಗಿ:ರಾಜ್ಯ ಸರ್ಕಾರದ ಜನವಿರೋಧಿ ನೀತಿ ಸಚಿವರು,ಶಾಸಕರುಭ್ರಷ್ಟಾಚಾರದಲ್ಲಿ ತೊಡಗಿರುವುದು,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ,ಮುಖಂಡರಾದ ಶಿವಕುಮಾರ ನಾಟೀಕಾರ,ಬಸವರಾಜ ಬಿರಬಿಟ್ಟಿ, ಮಹೇಶ್ವರಿ ವಾಲಿ,ಶಾಮರಾವ ಸೂರನ್, ಸುನೀಲ ಗಾಜರೆ, ಪ್ರವೀಣ ಜಾಧವ ಹಾಗೂ ಇತರರು ಭಾಗವಹಿಸಿದ್ದರು.