
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಗೋದುತಾಯಿ ಮಹಿಳಾ ಇಂಜಿನಿಯರಿAಗ್ ಕಾಲೇಜಿನಲ್ಲಿ ರವಿವಾರದಂದು ಇಂಟರ್‌ನಲ್ ಕಂಪ್ಲೇAಟ್ ಕಮೀಟಿ (ಐಸಿಸಿ) ವತಿಯಿಂದ “ಮಹಿಳೆಯರ ಹಕ್ಕು ಮತ್ತು ಸುರಕ್ಷತೆಗಾಗಿ ಕಾನೂನು ಅರಿವು” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕಲಬುರಗಿಯ ಉಚ್ಛ ನ್ಯಾಯಲಯದ ವಕೀಲರಾದ ಶ್ರೀಮತಿ ನೀವಾ ಎಂ ಚಿಮಕೋಡ್ ಉದ್ಘಾಟಿಸಿದರು. ಸಂಶೋಧನಾ ಡೀನ್ ಡಾ. ಸುಜಾತಾ ಮಲ್ಲಾಪುರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.