
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿದ್ದ
ತೆಲುಗು ಮತ್ತು ಕನ್ನಡ ರಂಗಭೂಮಿಯ ದಿಗ್ಗಜ ಬಳ್ಳಾರಿ ರಾಘವರ ಪ್ರತಿಮೆ ಇಂದು ಸ್ಥಳಾಂತರಿಸುವಾಗ ತುಂಡಾಗಿದೆ.
ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ಈ ಪ್ರತಿಮೆಯನ್ನು ರಾಘವ ಕಲಾ ಮಂದಿರದ ಬಳಿ ಇಂದು ಸಂಜೆ ಗುತ್ತಿಗೆದಾರರು ಸ್ಥಳಾಂತರಿಸಲ ಮುಂದಾಗಿದ್ದರು. ಆದರೆ ಪ್ರತಿಮೆ ಎರೆಡು ತುಂಡಾಯಿತು.
ಪ್ರತಿಮೆಯ ಇತಿಹಾಸ:
ನಗರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಜನಾರ್ಧನರೆಡ್ಡಿ, ಶ್ರೀರಾಮುಲು ಗುಂಪು ರಾಘವರ ಪ್ರತಿಮೆಯನ್ನು 2003 ರಲ್ಲಿ ರಾತ್ರೋ ರಾತ್ರಿ ಪ್ರತಿಷ್ಟಾಪನೆ ಮಾಡಿತ್ತು. ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಾನೂನು ರೀತಿ ಸಾಕಷ್ಟು ವಿರೋಧ ಮಾಡಿತ್ತು. ಆದರೂ ಪಟ್ಟು ಹಿಡಿದು ಬಿಜೆಪಿಯವರು ಈ ಪ್ರತಿಮೆ ಸ್ಥಾಪನೆಯಲ್ಲಿ ಯಶ್ವಿಯಾದರು.
ರಾಘವರ ಜಯಂತಿ ದಿನ ರಂಗಭೂಮಿಕ್ಷೇತ್ರದ ಜನತೆ, ರಾಘವ ಮೆಮೋರಿಯಲ್ಲ ಅಸೋಸಿಯೇಷನ್ ಹೂಮಾಲೆ ಹಾಕಿ ನಮಿಸುತ್ತಿದ್ದರು.
ರಾಘವನ ಹೆಸರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಸ್ಥಾಪಿಸುವುದಾಗಿ ಹೇಳಿದ್ದ ಜನಾರ್ಧನರೆಡ್ಡಿ ಮತ್ತವರ ಬಳಗ ಈ ವರಗೆ ಆ ಕೆಲಸ ಮಾಡಲಿಲ್ಲ.
ಬಸ್ ನಿಲ್ದಾಣದ ಮುಂದೆ:
ಈಗ ಇಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿರುವುದರಿಂದ ನಗರದ ಹಳೇ ಬಸ್ ನಿಲ್ದಾಣದ ಮುಂದೆ ರಾಘವರ ಕಂಚಿನ ಇಲ್ಲವೇ ಗ್ರಾನೈಟ್ ಪ್ರತಿಮೆ ಸ್ಥಾಪಿಸುವುದಾಗಿ ನಗರದ ಶಾಸಕರು ಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೆ ಭರವಶೆ ನೀಡಿದ್ದಾರಂತೆ.