
ಶಿವಮೊಗ್ಗ, ಮಾ. ೧೧: ನಿಯಂತ್ರಣ ಕಳೆದುಕೊಂಡ ಬೈಕ್ ಸವಾರನೋರ್ವ, ಸೇತುವೆ ಮೇಲಿಂದ ಚಾನಲ್ ನೀರಿಗೆ ಬೈಕ್ ಸಮೇತ ಬಿದ್ದ ಘಟನೆ ಭದ್ರಾವತಿ ನಗರದ ಹುತ್ತ ಕಾಲೋನಿಯ ಫಿಶ್ ಮಾರುಕಟ್ಟೆ ಸಮೀಪ ರಾತ್ರಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಸದರಿ ಸ್ಥಳದ ಬಳಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಚಾನಲ್ ಗೆ ಸವಾರ ಬಿದ್ದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ತುರ್ತು ವಾಹನ ಇಆರ್’ವಿ ? ೧೧೨ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಹಾಗೂ ಪ್ರವೀಣ್ ರವರು ಸ್ಥಳಕ್ಕಾಗಮಿಸಿದ್ದಾರೆ. ಚಾನಲ್ ನಲ್ಲಿ ಬಿದ್ದ ಯುವಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದರಿ ಸಿಬ್ಬಂದಿಗಳ ಸಕಾಲಿಕ ಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಅಭಿನಂದಿಸಿದ್ದಾರೆ.

























