ಸುರಂಗ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರವಲ್ಲ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರನ್ನು ಸಂಸದ ತೇಜಸ್ವಿ ಸೂರ್ಯ ಅವರು ಇಂದು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಬೆಂಗಳೂರು, ಅ.೨೮- ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆ ಮಾರ್ಗೋಪಾಯಗಳ ಕುರಿತು ಸಂಸದ ತೇಜಸ್ವಿ ಸೂರ್ಯ ನಗರದಲ್ಲಿಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.


ಈ ವೇಳೆ ಸುರಂಗ ಮಾರ್ಗ ನಿರ್ಮಾಣದಿಂದ ಆಗುವ ಸಾಧಕ ಬಾಧಕಗಳ ಕುರಿತು ಕಂಪನಿ ಸಿದ್ದಪಡಿಸಿರುವ ವರದಿಯನ್ನೂ ಉಪ ಮುಖ್ಯಮಂತ್ರಿ ಅವರಿಗೆ ನೀಡಿದ್ದಾರೆ.
ಸದಾಶಿವನಗರದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ಮು ಭೇಟಿ ಮಾಡಿ ರಾಜಧಾನಿ ಸಂಚಾರ ಸಮಸ್ಯೆ ಸೇರಿದಂತೆ ಅದಕ್ಕೆ ಪರಿಹಾರ ಮಾರ್ಗಗಳ ಕುರಿತು ಚರ್ಚೆ ನಡೆಸಿದ್ದಾರೆ.


ಟನಲ್ ರಸ್ತೆ ಯೋಜನೆ ಆಕರ್ಷಕವಾದರೂ ನಗರದ ದೀರ್ಘಾವಧಿಯ ಸಮಸ್ಯೆಗಳಿಗೆ ಪರಿಹಾರವಲ್ಲ. ಬದಲಿಗೆ, ಮೆಟ್ರೋ, ಟ್ರಾಂಮ್, ಇ-ಬಸ್ ಹಾಗೂ ಸುಸಜ್ಜಿತ ಪಾದಚಾರಿ ಮಾರ್ಗಗಳು ಉತ್ತಮ ಎಂದು ಉಪಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.


ರಸ್ತೆ ನಿರ್ಮಾಣದಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದ್ದು, ಹೊಸ ರಸ್ತೆ ನಿರ್ಮಾಣ ಕೇವಲ ತಾತ್ಕಾಲಿಕ ಪರಿಹಾರ ನೀಡುತ್ತದೆ ಬಳಿಕ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಇದನ್ನು “ಇಂಡ್ಯೂಸ್‌ಡ್ ಡಿಮ್ಯಾಂಡ್” ಎಂದು ಕರೆಯಲಾಗುತ್ತದೆ ಎಂದು ಕಂಪನಿ ವರದಿ ನೀಡಿದೆ ಎನ್ನುವುದೂ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದಾರೆ.


ಸಾಮಾನ್ಯ ರಸ್ತೆಯ ಸಾಮರ್ಥ್ಯ ಪ್ರತಿ ದಿಕ್ಕಿಗೆ ಗಂಟೆಗೆ ೧೮೦೦ ಪ್ರಯಾಣಿಕರು ಮಾತ್ರ.ಆದರೆ ಮೆಟ್ರೋ ಮಾರ್ಗಗಳು ಟ್ರಾಫಿಕ್ ಹಸನಾಗಿಸಲು ಬಹಳ ಪರಿಣಾಮಕಾರಿ ಪರ್ಪಲ್ ಲೈನ್ ಟ್ರಾಫಿಕ್ ಶೇಕಡಾ ೧೪ ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದಿದ್ದಾರೆ.


ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೆಟ್ರೋ ಮತ್ತು ಸಾರ್ವಜನಿಕ ರಸ್ತೆ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.