
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.24: ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆ ,ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು [ಸ್ವಾಯುತ್ತ] .ಇವರುಗಳ ಸಂಯುಕ್ತ ಆಶ್ರಯದಲ್ಲಿ. ನೀರುದ್ಯೋಗ ಯುವಕ ಯುವತಿಯರಿಗಾಗಿ ಉದ್ಯೋಗ ಮೇಳವನ್ನು, ನಗರದ“ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು [ಸ್ವಾಯುತ್ತ]ನಲ್ಲಿ ನಿನ್ನೆ ಆಯೋಜಿಸಲಾಗಿತ್ತು..
ಕಾಲೇಜಿನ ಪ್ರಾಚಾರ್ಯ ಡಾ. ಜಿ. ಪ್ರಹ್ಲಾದ್‍ಚೌಧರಿ “ ಮಾತನಾಡುತ್ತಾ, ಈ ಸಂಸ್ಥೆಯುಬಳ್ಳಾರಿಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನೀರುದ್ಯೋಗ ಯುವಕ ಯುವತಿಯರಿಗಾಗಿ ಉದ್ಯೋಗದ ಅವಕಾಶಗಳನ್ನು ಒದಗಿಸುವ ಈ ಉತ್ತಮವಾದ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜುಯು ಸಹ ಭಾಗಿಯಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.ಇಲ್ಲಿಯವರೆಗೆ ಹಲವಾರು ವಿಕಲಚೇತನರಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಸಹಾಯ ಸಹಕಾರವನ್ನು ನೀಡಿದೆ. ಹಾಗೇಯೆ ಮುಂಬರುವ ದಿನಗಳಲ್ಲಿ ನಮ್ಮ ಕಾಲೇಜುನ ಕಡೆಯಿಂದ ಸಹಾಯ ಸಹಕಾರಗಳು ಈ ಸಂಸ್ಥೆಗೆ ಸದಾ ಇರುತ್ತದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ಹೊನ್ನುರಲಿ ಮಾತಮಾಡಿ, ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಿರುವುದು ನನಗೆ ಸಂತೋಷತಂದಿದೆ. ಈ ಸಂಸ್ಥೆಯು ತುಂಬಾ ಅದ್ಭುತವಾದ ಕೆಲಸಕಾರ್ಯಗಳನ್ನು ಮಾಡುತ್ತಿದೆ ಎಂದರು.
ಸಮರ್ಥನಂ ಸಂಸ್ಥೆಯ ಶಾಖಾ ಮುಖ್ಯಸ್ಥ ಮೌನೇಶಪ್ಪ ಮಾತನಾಡಿ,.“ಸಮರ್ಥನಂ ಅಂಗವಿಕಲ ಸಂಸ್ಥೆಯು ಬೆಳೆದು ಬಂದದಾರಿಯನ್ನುಹಂಚಿಕೊಂಡರು. ಸಮರ್ಥನಂ ಅಂಗವಿಕಲರ ಸಂಸ್ಥೆಯು 1997ರಲ್ಲಿ ಸ್ಥಾಪಿತಗೊಂಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಸ್ಥೆಯಾಗಿದೆ. 2030ರ ವೇಳೆಗೆ 10,00,000 ವಿಕಲಚೇತನರು ಮತ್ತು ಹಿಂದುಳಿದವರ ಜೀವನವನ್ನು ಸ್ಪರ್ಶಿಸುವ ದೃಷ್ಠಿಯನ್ನು ಹೊಂದಿರುವಂತಹ ಸಂಸ್ಥೆಯನ್ನು ಪರಿಚಯಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ, ಪೌಷ್ಟಿಕ ಆಹಾರ, ವೃತ್ತಿಪರತರಬೇತಿ ಮತ್ತುಉದ್ಯೋಗಆಧಾರಿತಪುನರ್ವಸತಿಯನ್ನು ವದಗಿಸುವುದರ ಮೇಲೆ ಕೇಂದ್ರೀಕರಿಸಿದೆ. ವಿಕಲಚೇತನರ ಮತ್ತು ಹಿಂದುಳಿದವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ” ಎಂದರು..
ಉಪನ್ಯಾಸಕ ಕೆ.ಬಸಪ್ಪ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಪರಶುರಾಮ್, ಶ್ರೀಮತಿ ಡಾ|| ಸಾಲಿಯ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಸಿಬ್ಬಂದಿಗಳಾದ ರಾಮಾಂಜನೇಯ, ಪವಿತ್ರರಾಜ್,ಕಾಶಯ್ಯಹೀರೆಮಠ್, ಕಾಡಸಿದ್ದ, ಭೀಮರೆಡ್ಡಿ, ಗೌತಮಿ. ಹಾಗೂ ಜಿಲ್ಲಾಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿಗಳಾದ ಬಸವರಾಜ, ವೆಂಕಟಲಕ್ಷ್ಮಿ ಮತ್ತು ಗೀತಾ ಉಪಸ್ಥಿತರಿದ್ದರು, ನಿರೂಪಣೆಯನ್ನು ಗಣೇಶ ಹೆಚ್. ನೆರೆವೇರಿಸಿದರು.
ಈ ಉದ್ಯೋಗಮೇಳಕ್ಕೆ 18 ಪ್ರತಿಷ್ಟಿತ ಐಟಿ, ಬಿಪಿಓ, ರೀಟೆಲ್ ಮತ್ತು ಮುಂತಾದ ಕಂಪನಿಗಳು ಭಾಗವಹಿಸಿದ್ದವು. ಈ ಉದ್ಯೋಗಮೇಳದಲ್ಲಿ 1000ಕ್ಕು ಹೆಚ್ಚು ಜನರು ಭಾಗವಹಿಸಿ ಈ ಮೇಳವನ್ನು ಸದ್ವಿನಿಯೋಗ ಮಾಡಿಕೊಂಡರು. ಈ ಉದ್ಯೋಗಮೇಳದಲ್ಲಿ1084ಅಭ್ಯರ್ಥಿಗಳುನೋಂದಣಿ ಮಾಡಿಸಿಕೊಂಡಿದ್ದಾರೆ,291ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆಯೇ 107ಅಭ್ಯರ್ಥಿಗಳನ್ನು ಶಾರ್ಟ ಲೀಸ್ಟ್‍ನಲ್ಲಿದ್ದಾರೆ.