ನಟ ಮಿತ್ರ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೊಕಿನ ಅಂಚೆಹಳ್ಳಿ ಗ್ರಾಮದಲ್ಲಿ ’ಮಂತ್ರ ಮಂಗಲ್ಯ’ ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದಾರೆ. ಮಿತ್ರ ಹೆಸರು ಕೇಳಿದಾಕ್ಷಣ ಅವರ ಕಾಮಿಡಿ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ’ರಾಗ’ ಮತ್ತು ’ಪರಸಂಗ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಸದ್ಯ ಅವರು ’ಕರಾವಳಿ’ ಲ್ಯಾಂಡ್ ಲಾರ್ಡ್’ ಸಿನಿಮಾಗಳಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಭಿನ್ನ ಲುಕ್‌ದಲ್ಲಿರುವ ಸ್ಟಿಲ್ಸ್‌ಗಳು ಎಲ್ಲಡೆ ಗಮನ ಸೆಳೆಯುತ್ತಿದೆ. ಹೊಸ ಅನುಭವ ಎನ್ನುವಂತೆ ರಾಷ್ಟ್ರ ಕವಿ ಕುವೆಂಪು ’ಮಂತ್ರ ಮಂಗಲ್ಯ’ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೀಮಿತ ಬಜೆಟ್‌ದಲ್ಲಿ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಜತೆಗೆ ಚಿತ್ರೀಕರಣಕ್ಕೆಂದೇ ಯೋಗ್ಯವಾದ ಜಾಗ ಇದಾಗಿದ್ದು, ಈಗಾಗಲೇ ಒಂದಷ್ಟು ನಿರ್ಮಾಪಕರು ಇಲ್ಲಿಗೆ ಭೇಟಿ ನೀಡಿ, ಶೂಟಿಂಗ್ ಮಾಡಲು ಚಿಂತನೆ ನಡೆಸಿದ್ದಾರೆ. ತಾನು ಸಹ ಎರಡು ದಶಕಗಳಿಂದ, ಇದೇ ಉದ್ಯಮದಲ್ಲಿ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಅದಕ್ಕಾಗಿ ಸಿನಿಮಾಕ್ಕೆ ಅಂತಲೇ ಒಂದಷ್ಟು ರಿಯಾಯತಿ ನೀಡಲಾಗುವುದು ಎನ್ನುತ್ತಾರೆ ಮಿತ್ರ.