
ಸಂಜೆವಾಣಿ ವಾರ್ತೆ
ಸಂಡೂರು :ಅ:21 ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಬಳಿ ಇರುವ ಕೊಮಡಪುರದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಲವಾರು ವರ್ಷಗಳಿಂದ ಖಾಯಂ ಶಿಕ್ಷಕರ ಕೊರತೆಯಿಂದ ಶಾಲೆಯಲ್ಲಿನ 6 ಕಂಪ್ಯೂಟರ್‍ಗಳು ಉಪಯೋಗಕ್ಕೆ ಬಾರದಂತಾಗಿದೆ. ಶಾಲೆಯಲ್ಲಿ 1 ರಿಂದ 6ನೇ ತರಗತಿಯ ವರೆಗೆ 150 ಮಕ್ಕಳಿದ್ದು, 150 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಒಬ್ಬರು ಮುಖ್ಯ ಶಿಕ್ಷಕರು 4 ಜನ ಅತಿಥಿ ಶಿಕ್ಷಕರು ಸೇವೆ ಸಲ್ಲಿಸಿ ಸೇವೆಯಲ್ಲಿ ಗಣಕ ಯಂತ್ರ ಶಿಕ್ಷಕ ಇತರೆ ಶಿಕ್ಷಕರು ಖಾಯಂ ಆಗಿ ಇಲ್ಲದೇ ಇರುವುದರಿಂದ ಲಕ್ಷಾಂತರ ವೆಚ್ಚ ಮಾಡಿದ ಗಣಕ ಯಂತ್ರಗಳು ವ್ಯರ್ಥವಾಗಿದ್ದು, ಮಕ್ಕಳ ಕಲಿಕೆ ಹಿನ್ನಡೆಯಾಗಿದೆ. ಶಾಲೆಯಲ್ಲಿ 6 ಗಣಕ ಯಂತ್ರಗಳನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಂಡಳಿಯ ಅನುದಾನ ಸೇರಿದಂತೆ ಸರ್ಕಾರದ ಇತರೆ ಅನುದಾನದಲ್ಲಿ ಗಣಕ ಯಂತ್ರಗಳನ್ನು ಖರೀದಿಸಲಾಗಿದ್ದು, ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಅಳವಡಿಸಲಾಗಿದೆ. ಗಣಕಯಂತ್ರ ಬಳಕೆ ಮಾಡಲು ಸೂಕ್ತವಾದ ಆಸನೆಗಳನ್ನು ಮಾಡದೇ ಇರುವುದರಿಂದ ಕಂಪ್ಯೂಟರ್ ಸೇವೆ ವ್ಯರ್ಥವಾಗಿದೆ.
ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ಹಲವಾರು ವರ್ಷಗಳಿಂದ ಖಾಯಂ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಬಹಳ ತೊಂದರೆಯಾಗಿದೆ. ಸರ್ಕಾರವು ಕುಡಲೇ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಗಣಕಯಂತ್ರವನ್ನು ಶಿಕ್ಷಕರು ಸೇರಿದಂತೆ ಇತರೆ ವಿಷಯಗಳು ಶಿಕ್ಷಕರನ್ನು ಶೀಘ್ರವಾಗಿ ನೇಮಕ ಮಾಡಬೇಕು. ಶಾಲೆಯ ಆವರಣದಲ್ಲಿನ ಹಳೆ ಕೊಠಡಿಗಳನ್ನು ನೂತನ ಶಾಲಾ ಕೊಠಡೆಇಗಳನ್ನು ನಿರ್ಮಿಸಬೇಕು. ಶಾಲೆಗೆ ಕುಡಿಯವ ನೀರು ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ಗ್ರಾಮದಲ್ಲಿನ ಸಾರ್ವಜನಿಕರು ಶಿಕ್ಷಕ ಇಲಖೆಯವರನ್ನು ಒತ್ತಾಯಿಸಿದ್ದಾರೆ. ಶಾಲೆಯಲ್ಲಿನ ಗಣಕಯಂತ್ರಗಳನ್ನು 6ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಡುವಿನ ಸಮಯದಲ್ಲಿ ಬಳಕೆ ಮಾಡಲಾಗುತ್ತಿದೆ. ಎನ್ನುವ ಅಳಲನ್ನು ತೊಡಿಕೊಂಡವರು ಮುಖ್ಯ ಶಿಕ್ಷಕ ಮಧುಕೇಶವರವರು ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಾಲೆಗೆ ಖಾಯಂ ಶಿಕ್ಷಕರನ್ನು ಶೀಘ್ರವಾಗಿ ನೇಮಕ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಐ.ಆರ್. ಅಕ್ಕಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.