ಶಾಮನೂರು ನಿಧನಕ್ಕೆ ಸುರ್ಜೆವಾಲಾ ಸಂತಾಪ

ದಾವಣಗೆರೆ, ಡಿ.೧೫-ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಿವಶಂಕರಪ್ಪ ಅವರ ನಿಧನವನ್ನು ‘ರಾಜ್ಯಕ್ಕೆ ತುಂಬಲಾರದ ನಷ್ಟ’ ಎಂದು ವರ್ಣಿಸಿದ್ದಾರೆ. ಅವರು ಸಂತಾಪ ಸಂದೇಶದಲ್ಲಿ ಹೀಗೆಂದು ತಿಳಿಸಿದ್ದಾರೆ.


ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಅತೀವ ದುಃಖಿತನಾಗಿದ್ದೇನೆ.ಶಿಕ್ಷಣತಜ್ಞರಾಗಿ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ, ದಾವಣಗೆರೆಯನ್ನು ಜ್ಞಾನಕೇಂದ್ರವನ್ನಾಗಿ ರೂಪಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸಿದ್ದರು.ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಕುಟುಂಬಕ್ಕೆ ದಾರಿದೀಪವಾಗಿದ್ದರು.


“ಅವರ ಸರಳತೆ, ಸಾರ್ವಜನಿಕ ಸೇವೆಯಲ್ಲಿನ ನಿಷ್ಠೆ, ಎಲ್ಲಾ ಪಕ್ಷಗಳ ನಾಯಕರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸೇವಾ ಪರಂಪರೆ ಸದಾಕಾಲ ಉಳಿಯುತ್ತದೆ.
“ಸುರ್ಜೇವಾಲಾ ಅವರು ದಿವಂಗತರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಾಂತ್ವನೆ ಸಾರಿದ್ದು, “ಅವರ ಕುಟುಂಬ, ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.