
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,26- ವಿಧಾನ ಪರಿಷತ್ ನ ಅಧಿವೇಶನದಲ್ಲಿ ನಿನ್ನೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು, ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕದ ಮೇಲೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು. ಅಧಿಕಾರಿಗಳು ವಿಧೇಯಕದ ಪದಗಳನ್ನು ಸರಿಪಡಿಸಲು ಸೂಚನೆ ನೀಡುವಂತೆ ಸರ್ಕಾರವನ್ನು ಕೋರಿದರು.
ಈ ವಿಧೇಯಕವನ್ನು ತರುವ ಬಗ್ಗೆ ಹಾಗೂ ಶಿಶು ಪಾಲನೆ ಮಾಡುವ ಸಣ್ಣ ಮಕ್ಕಳ ತಾಯಂದಿರ ಬಗ್ಗೆ ಯೋಚನೆ ಮಾಡಿ, ಸೂಕ್ತ ತಿದ್ದುಪಡಿಗಳನ್ನು ತರುವಂತೆ ಈ ಹಿಂದೆ ಪ್ರಶ್ನೋತ್ತರದ ಸಮಯದಲ್ಲಿ ಚರ್ಚೆ ನಡೆಸಿ ಸಚಿವರ ಗಮನಕ್ಕೆ ತರಲಾಗಿತ್ತು ಎಂದು ಹೇಳಿದ್ದಾರೆ.




























