Home ಜಿಲ್ಲೆ ಮಂಗಳೂರು ವಿದ್ಯಾ ನಾಟಕ ಸಭಾ ದ ನೂತನ ಅಧ್ಯಕ್ಷರಾಗಿ ಟಿ. ಮೋಹನ್ ಸುರತ್ಕಲ್

ವಿದ್ಯಾ ನಾಟಕ ಸಭಾ ದ ನೂತನ ಅಧ್ಯಕ್ಷರಾಗಿ ಟಿ. ಮೋಹನ್ ಸುರತ್ಕಲ್

ಮಂಗಳೂರಿನ ವಿದ್ಯಾ ನಾಟಕ ಸಭಾ ದ ನೂತನ ಅಧ್ಯಕ್ಷರಾಗಿ ಟಿ. ಮೋಹನ್ ಸುರತ್ಕಲ್ ಇತ್ತೀಚಿಗೆ ನಡೆದ ವಿದ್ಯಾ ನಾಟಕ ಸಭಾದ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಗೊಂಡರು. (ಇವರು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಒಳಪಟ್ಟಿರುವ ತಲೆಬೈಲ್ ಕೂಡುವಳಿಕೆ ಮೋಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ದ ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ದಶಕಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸುರತ್ಕಲ್ ನಲ್ಲಿ ಮಾಂಗಲ್ಯ ಜೂವೆಲ್ಲರಿಯ ಮಾಲಕರಾಗಿದ್ದಾರೆ.) ಗೌರವಾಧ್ಯಕ್ಷರಾಗಿ ಶ್ರೀ ಜಿ. ಎಸ್. ಆಚಾರ್, ಕಾರ್ಯದರ್ಶಿ ಯಾಗಿ ಶ್ರೀ ಮೋಹನ್ ದಾಸ್ ಪಡೀಲ್, ಶ್ರೀ ಕೋಷಾಧಿಕಾರಿ ಯಾಗಿ ಶ್ರೀ ಸುರೇಶ ದೇರಳಕಟ್ಟೆ ಹಾಗೂ ಸರ್ವಶ್ರೀ ಯೋಗೀಶ್ ಬೋಳೂರು, ಎಸ್ ವಿ ಆಚಾರ್, ನೆತ್ತರ ಯೋಗೀಶ್, ಜಗದೀಶ್ ಸಿದ್ದಕಟ್ಟೆ, ಶ್ರೀಪತಿ ಎಂ, ಟಿ ವಿಗ್ನೇಶ್, ಕೇಶವ ಕದ್ರಿ, ವಿನೋದ್ ರಾವ್, ಕೆ ಸುಧಾಮ ಸುರತ್ಕಲ್, ಎಚ್ ಸಂಜೀವ ಆಚಾರ್ಯ, ಟಿ ಎಂ ಸುಹಾನ್, ರಾಜೇಶ್ ಆಚಾರ್ ಫರಂಗಿಪೇಟೆ, ಟಿ ಗುಣಕರ್ ಸದಸ್ಯರಾಗಿರುತ್ತಾರೆ.