ರಾಜ್ಯದಲ್ಲಿ ಈ ವರ್ಷ 29 ಸಾವಿರ ಬಾಲ್ಯ ವಿವಾಹ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.24:
– ರಾಜ್ಯದಲ್ಲಿ ಈ ವರ್ಷ 29 ಸಾವಿರ ಬಾಲ್ಯ ವಿವಾಹವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧÀರಿ ಕಳವಳ ವ್ಯಕ್ತಪಡಿಸಿದರು.
ನಗರದ ಸೇಠ್ ಮೋಹನ್‍ದಾಸ್ ತುಳಸೀದಾಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣ ಬಡತನ ಮತ್ತು ಅದರ ಬಗ್ಗೆ ಅರಿವಿಲ್ಲದೆ ಇರುವುದು ಎಂದು ತಿಳಿಸಿದರು. ಇಂದಿನ ಮಕ್ಕಳು 10ನೇ ತರಗತಿ ಮತ್ತು ಕಾಲೇಜಿನ ಮೆಟ್ಟಿಲು ಹತ್ತಿದ ತಕ್ಷಣ ಪ್ರೀತಿಯಲ್ಲಿ ಬಿದ್ದು ಗರ್ಭಿಣಿಯರಾಗಿರುತ್ತಾರೆ. ಅಲ್ಲದೇ ಬಾಲ್ಯ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ತಂದೆ ತಾಯಿ ಕೂಲಿ ಕೆಲಸಕ್ಕೆ ಹೋದಾಗ ಮಗುವಿನ ಬಗ್ಗೆ ಆ ಸಂದರ್ಭದಲ್ಲಿ ಗಮನ ಹರಿಸುವುದಿಲ್ಲ. ಶಾಲೆಯಲ್ಲಿ ಊಟ ಸಿಗುತ್ತದೆ ಎಂದು ಕಳುಹಿಸಿಕೊಡುತ್ತಾರೆ. ಮಗು ಗರ್ಭಿಣಿ ಆಗಿದೆ ಎನ್ನುವುದೂ ಸಹ ತಿಳಿದಿರಲ್ಲ. ಅಂತಹ ಎಷ್ಟೋ ಪ್ರಸಂಗಗಳು ನಡೆದಿದೆ ಎಂದು ಹೇಳಿದರು.


ಬಾಲ್ಯ ವಿವಾಹ ಮತ್ತು ಇಂತಹ ಅನಿಷ್ಠ ಪದ್ದತಿಗಳು ನಿರ್ಮೂಲನೆಯಾಗಬೇಕಾದರೆ ಬಡತನ ಮೊದಲು ನಿರ್ಮೂಲನೆಯಾಗಬೇಕು. ಪೆÇೀಷಕರಲ್ಲಿ ಮತ್ತು ಮಕ್ಕಳಲ್ಲಿ ಅರಿವು ಮೂಡಿಬೇಕು. ಪಂಚಾಯಿತಿ ಮಟ್ಟಗಳಲ್ಲಿ ಕಡ್ಡಾಯವಾಗಿ ಕಾವಲು ಸಮಿತಿ ರಚನೆಯಾಗಬೇಕು ಹಾಗೂ ಮಹಿಳಾ ಗ್ರಾಮ ಸಭೆ ನಡೆಯಬೇಕು. ಎಷ್ಟೋ ಮಹಿಳೆಯರಿಗೆ ಕಾವಲು ಸಮಿತಿಯ ಬಗ್ಗೆ ಗೊತ್ತೇ ಇಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಹೇಳಿದಂತೆ ಪ್ರತಿಯೊಬ್ಬರು ಅರಿವು ಮೂಡಿಸಿಕೊಳ್ಳಬೇಕು. ಅರಿವಿಲ್ಲದಿದ್ದರೆ ಸತ್ತಂತೆ. ಯಾವಾಗ ನಮ್ಮ ಜನ ಎಚ್ಚೆತ್ತುಕೊಳ್ಳುತ್ತಾರೋ, ಕಾನೂನು ಮತ್ತು ಸಂವಿಧಾನದ ಪ್ರಕಾರ ಏನೆಲ್ಲ ಅಧಿಕಾರ, ಹಕ್ಕು ಇದೆಯೋ ಎಂಬುದನ್ನು ತಿಳಿದುಕೊಳ್ಳುತ್ತಾರೋ ಅಂದೇ ಇದಕ್ಕೆಲ್ಲಾ ಪರಿಹಾರ ಎಂದು ಹೇಳಿದರು.


ಸೇಠ್ ಮೋಹನ್‍ದಾಸ್ ತುಳಸೀದಾಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಅನುರಾಧÀ ಸೇರಿದಂತೆ ಇತರರು ಹಾಜರಿದ್ದರು.