
ಶಿವಮೊಗ್ಗ, ಮಾ.4:- ಯುವತಿಯೋರ್ವಳಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವನನ್ನು ಅಕ್ಕ ಪಡೆ' ಪೆÇಲೀಸರು ವಶಕ್ಕೆ ಪಡೆದಿದೆ. ಅಕ್ಕ ಪಡೆ’ ಸಿಬ್ಬಂದಿಗಳು ಬಸ್ ನಿಲ್ದಾಣ ಆವರಣದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ, ಯುವತಿಯೋರ್ವಳು ಅಳುತ್ತಾ ನಿಂತಿರುವುದನ್ನು ಗಮನಿಸಿದ್ದಾರೆ.
ಯುವತಿ ಬಳಿ ತೆರಳಿ ಸಿಬ್ಬಂದಿಗಳು ವಿಚಾರಿಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ತೊಂದರೆ ಕೊಡುತ್ತಿರುವ ಮಾಹಿತಿ ತಿಳಿಸಿದ್ದಾಳೆ. ತಕ್ಷಣವೇ ಸದರಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳಾ ಪೆÇಲೀಸ್ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಜೊತೆಗೆ ಲಘು ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾರ್ಚ್ 03 ರಂದು ಪೆÇಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.




























