ಮೋದಿ ನಮಗೆ ಸಹೋದರ

ಜೆರುಸಲೆಮ್,ಫೆ.26:- ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸ್ನೇಹಿತನಿಗಿಂತ ಹೆಚ್ಚು , ಅವರೊಬ್ಬ ಸಹೋದರ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಬಣ್ಣಿಸಿದ್ದಾರೆ.
ಇದೇ ವೇಳೆ 2023ರ ಅಕ್ಟೋಬರ್ 7 ರ ಘೋರ ದಾಳಿಯ ನಂತರ ಇಸ್ರೇಲ್ ಪರವಾಗಿ ಭಾರತಕ್ಕಾಗಿ ನಿಂತಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ಧಾರೆ
ಹಮಾಸ್ ನಡೆಸಿದ ಮಾರಕ ದಾಳಿಯನ್ನು ಖಂಡಿಸಿದ ಮೊದಲ ವಿಶ್ವ ನಾಯಕರಲ್ಲಿ ಪ್ರಧಾನಿ ನರೆಂದ್ರ ಮೋದಿ ಕೂಡ ಒಬ್ಬರು. ಸುಮಾರು 1,200 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 250 ಜನರು ಅಪಹರಿಸಲ್ಪಟ್ಟಿದ್ದ ಘಟನೆ ಇದು, ಇಸ್ರೇಲ್ ಬೆಂಬಲಕ್ಕೆ ನಿಂತ ಭಾರತಕ್ಕೆ ಕೃತಜ್ಞತೆಗಳು ಎಂದಿದ್ಧಾರೆ


ಪ್ರೀತಿಯ ಸ್ನೇಹಿತ ನರೇಂದ್ರ ಮೋದಿ ಅವರೇ ನಿಮ್ಮ ಭೇಟಿಯಿಂದ ವಿಶೇಷವಾಗಿ ಭಾವುಕನಾಗಿದ್ದೇನೆ. ಇಸ್ರೇಲ್ ಉತ್ತಮ ಸ್ನೇಹಿತ ಮತ್ತು ವಿಶ್ವ ವೇದಿಕೆಯಲ್ಲಿ ಉತ್ತಮ ನಾಯಕ. ನರೇಂದ್ರ ಮೋದಿ ಅವರು ಸ್ನೇಹಿತನಿಗಿಂತ ಹೆಚ್ಚು. ನೀವು ಒಬ್ಬ ಸಹೋದರ ಎಂದು ಹೇಳಿದ್ದಾರೆ
ಶೂಗಳನ್ನು ತೆಗೆದು ಸಮುದ್ರದಲ್ಲಿ ನಡೆದೆವು. ನೀರಿನ ಮೇಲೆ ನಡೆಯಲಿಲ್ಲ, ಆದರೆ, ಪವಾಡ 2017 ರಲ್ಲಿ ಪ್ರಧಾನಿಯಾಗಿ ಮೋದಿ ಇಸ್ರೇಲ್‍ಗೆ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ ಇಬ್ಬರು ನಾಯಕರು ಸಾಗರದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಂಡ ವೈರಲ್ ಚಿತ್ರ ಉಲ್ಲೇಖಿಸಿದ್ದಾರೆ


ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಹೇಗೆ ದ್ವಿಗುಣಗೊಂಡಿದೆ ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯದ ಬಗ್ಗೆ ಇಸ್ರೇಲ್‍ನಲ್ಲಿ ಹೆಚ್ಚು ಪ್ರಚಾರ ಮಾಡಲಾಗಿದೆ. ಇಂಬು ನೀಡುವಂತೆ ನೆಸ್ಸೆಟ್‍ನಲ್ಲಿಯೂ ಸಹ ಇಬ್ಬರ ನಾಯಕರ ನಡುವಣ ದೀರ್ಘ ಅಪ್ಪುಗೆ ಸಂಸದರಲ್ಲಿ ಪುಳಕ ಉಂಟು ಮಾಡಿದೆ


ಭಾರತವನ್ನು ದೈತ್ಯ ದೇಶ ಎಂದು ವಿವರಿಸಿದ ಅವರು, ನಾಗರಿಕತೆಗಳು ಅಭಿವೃದ್ಧಿ ಹೊಂದಿದ ಎರಡು ಸ್ಥಳಗಳೆಂದರೆ ಸಿಂಧೂ ಕಣಿವೆ ಮತ್ತು ಜೋರ್ಡಾನ್ ಕಣಿವೆ. ನಾವಿಬ್ಬರೂ ಕಾಲದ ಯುಗಗಳನ್ನು ದಾಟಿ, ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದೆವು. ನಾವು ಅನೇಕ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದೇವೆ. ಅರ್ಥವಾಗುವ ಜನರಿಗೆ ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ
ಅಕ್ಟೋಬರ್ 7 ರಂದು ನಡೆದ ಭೀಕರ ದಾಳಿಯ ನಂತರ, ಇಸ್ರೇಲ್ ಅನ್ನು ನೈತಿಕವಾಗಿ ಬೆಂಬಲಿಸಿದ್ದು ಮೊದಲು ಬಾರತ ಎಂದ ಅವರು ಇಸ್ರೇಲ್ ಬೆನ್ನ ಹಿಂದೆ ನಿಂತಿದ್ದೀರಿ ಮತ್ತು ಯಹೂದಿಗಳಿಗೆ ಬೆಂಬಲ ಸೂಚಿಸಿದ್ದೀರಿ. ನಿಮಗೆ ಧನ್ಯವಾದಗಳು ಎಂದು ತಿಳಿಸಿದರು


ಇಸ್ಲಾಮಿಕ್ ಭಯೋತ್ಪಾದನೆಯ ಅನಾಗರಿಕತೆಯ ವಿರುದ್ಧ ಇಸ್ರೇಲ್ ನಾಗರಿಕತೆಯು ಮುಂಚೂಣಿಯಲ್ಲಿದೆ. ಆದರೆ, ಈ ಜ್ವಾಲಾಮುಖಿಯ ಲಾವಾ ಪ್ರಪಂಚದಾದ್ಯಂತ ಹರಡಿದೆ. ಭಾರತ ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಏಕೆಂದರೆ ಇಸ್ರೇಲ್ ಅನಾಗರಿಕತೆಯ ವಿರುದ್ಧ ಕಬ್ಬಿಣದ ಗೋಡೆಯಾಗಿ ನಿಂತಿದೆ. ಅಸ್ಥಿರ ಅವ್ಯವಸ್ಥೆಯ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ಭದ್ರಕೋಟೆಯಾಗಿದೆ ಎಂದು ಹೇಳಿದ್ದಾರೆ