ಭಾರತ- ಯುರೋಪ್ ವ್ಯಾಪಾರ ಒಪ್ಪಂದ ಅಮೆರಿಕ ಹಿತಾಸಕ್ತಿಗೆ ಧಕ್ಕೆ

ವಾಷಿಂಗ್ಟನ್, ಜ.29-ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ಒಪ್ಪಂದ ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಭಾರತದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಖಾಸಗೀ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ದೇಶಗಳು ತಮಗೆ ಉತ್ತಮವಾದದ್ದನ್ನು ಮಾಡಬೇಕು ಆದರೆ ಭಾರತ- ಯುರೋಪಿಯನ್ ಒಕ್ಕೂಟದ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದ ಹಿತಾಸಕ್ತಿಗೆ ವಿರುದ್ಧವಾದುದು ಎಂದಿದ್ದಾರೆ.


ಯುರೋಪಿನ ಕ್ರಮಗಳಿಂದ “ತುಂಬಾ ನಿರಾಶೆಗೊಂಡಿದ್ದೇನೆ, ವಿಶೇಷವಾಗಿ ಉಕ್ರೇನ್‍ನಲ್ಲಿನ ಯುದ್ಧವನ್ನು ಗಮನಿಸಿದರೆ ಭಾರತ ಮತ್ತು ಯುರೋಪಿಯನ್ ಒಕ್ಕೂಟ ಪರೋಕ್ಷವಾಗಿ ರಷ್ಯಾಗೆ ಬೆಂಬಲಿಸುತ್ತಿವೆ ಎಂದಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸಲು ಭಾರತದ ಮೇಲೆ ಶೇಕಡಾ 25ರಷ್ಟು ಸುಂಕವನ್ನು ವಿಧಿಸಿದ್ದೇವೆ. ಕಳೆದ ವಾರ ಏನಾಯಿತು ಎಂದು ಊಹಿಸಿ ಯುರೋಪಿಯನ್ನರು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು” ಎಂದು ಅವರು ಹೇಳಿದ್ದಾರೆ.

“ಯುರೋಪಿಯನ್ನರು ಉಕ್ರೇನ್-ರಷ್ಯಾ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದಾರೆ” ಭಾರತ ಅನುಮೋದಿತ ರಷ್ಯಾದ ತೈಲ ಖರೀದಿಸಲು ಪ್ರಾರಂಭಿಸಿದಾಗ, ಯುರೋಪಿಯನ್ ರಾಷ್ಟ್ರಗಳು ನಂತರ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸಿಸುತ್ತಿವೆ ಎಂದಿದ್ದಾರೆ.

ಯುರೋಪಿಯನ್ನರು ತಮ್ಮ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಅಮೆರಿಕ ಭಾರತದ ಮೇಲೆ ಶೇ. 25 ರಷ್ಟು ಸುಂಕ ವಿಧಿಸಿದೆ.ಯುರೋಪಿಯನ್ ಒಕ್ಕೂಟ ನಮ್ಮೊಂದಿಗೆ ಸೇರಲು ಇಷ್ಟವಿರಲಿಲ್ಲ ಮತ್ತು ಈ ವ್ಯಾಪಾರ ಒಪ್ಪಂದವನ್ನು ಮಾಡಲು ಬಯಸಿದ್ದರಿಂದ ಇದು ಸಂಭವಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಉಕ್ರೇನ್‍ನಲ್ಲಿನ ಯುದ್ಧಕ್ಕಿಂತ ಯುರೋಪ್ ವ್ಯಾಪಾರ ಹಿತಾಸಕ್ತಿಯನ್ನು ಹೆಚ್ಚು ಇರಿಸಿದೆ. ಉಕ್ರೇನಿಯನ್ ಜನರ ಮಹತ್ವದ ಬಗ್ಗೆ ಯುರೋಪಿಯನ್ನರು ಮಾತನಾಡುವುದನ್ನು ಕೇಳಿದಾಗಲೆಲ್ಲಾ ಉಕ್ರೇನಿಯನ್ ಜನರಿಗಿಂತ ವ್ಯಾಪಾರವನ್ನು ಮುಂದಿಟ್ಟರು ಎಂಬುದನ್ನು ನೆನಪಿಡಿ”ಎಂದು ಹೇಳಿದ್ದಾರೆ.