Home ಜಿಲ್ಲೆ ಭಕ್ತಿಭಾವದಿಂದ ನಡೆದ ಕೊಳಗಲ್ಲಿನ ಎರಿತಾತಾ ಜಾತ್ರಾ ಮಹೋತ್ಸವ

ಭಕ್ತಿಭಾವದಿಂದ ನಡೆದ ಕೊಳಗಲ್ಲಿನ ಎರಿತಾತಾ ಜಾತ್ರಾ ಮಹೋತ್ಸವ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.26: ತಾಲೂಕಿನ ಕೊಳಗಲ್ಲು  ಗ್ರಾಮದ ಆರಾಧ್ಯ ದೈವ ಎರಿತಾತಾ ದೇಗುಲದ ರತೋತ್ಸವ ನಿನ್ನೆ ಸಂಜೆ ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಜರುಗಿತು.

ಜಾತಿ, ಜಾತಿಗಳ ಕಲಹ ವಿವಾದದಿಂದ. ಈ ವರ್ಷ ಜಾತ್ರೆ ನಡೆಯುವ ಬಗ್ಗೆ ಭಕ್ತರಲ್ಲಿ ಆತಂಕವಿತ್ರು. ಆದರೆ ಅಧಿಕಾರಿಗಳು ಜಾತಿ ಕಲಹವನ್ನು ಬದಿಗಿಟ್ಟು ಗ್ರಾಮದ ಮುಖಂಡರ ಮನವೊಲಿಸಿ ನಿನ್ನೆ ಸಂಜೆ ರಥೋತ್ಸವ ಸಾಂಗವಾಗಿ ಜರುಗುವಂತೆ ನೋಡಿಕೊಂಡರು. ಭಲ್ತರೂ ಇದಕ್ಕೆ ಸಹಕಾರ ನೀಡಿದರು.

ಬಿಗಿ ಪೊಲೀಸ್ ಬಂದೋ ಬಸ್ತಿನಲ್ಲಿಯೇ ನಡೆದ ರಥಕ್ಕೆ ಭಕ್ತರು ಹೂಹಣ್ಣು ಕಾಯಿ ಅರ್ಪಿಸಿ ನಮನ ಸಲ್ಲಿಸಿದರು.

ಗ್ರಾಮದಲ್ಲಿ ಕ್ಷೌರದಂಗಡಿಯಲ್ಲಿ ಪರಿಶಿಷ ಜಾತಿ ಜನಾಂಗಕ್ಕೆ ಕ್ಷೌರ ಮಾಡುವ ವಿಷಯ ಇನ್ನು ಬಗೆಹರಿದಿಲ್ಲ.