ಟೆಲ್ ಅವೀವ್,ಜೂ.18-ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ.
ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಬೇಷರತ್ತಾಗಿ ಶರಣಾಗುವಂತೆ ಮನವಿ ಮಾಡಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರೂತ್ ಸೋಷಿಯಲ್ ನಲ್ಲಿ UNCONDITIONAL SURRENDER ದೊಡ್ಡ ದಪ್ಪ ಅಕ್ಷರಗಳಲ್ಲಿ ಬರೆದಿದ್ದಾರೆ.
ಟ್ರಂಪ್ ಅವರ ಬೆದರಿಕೆಗಳಿಂದ ತಲೆಕೆಡಿಸಿಕೊಳ್ಳದ ಇರಾನ್ನ ಅಲಿ ಖಮೇನಿ, ಇಸ್ರೇಲ್ ಮೇಲೆ ಯಾವುದೇ ಕರುಣೆ ತೋರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಟೀಕಿಸುತ್ತಾ, ಟ್ರಂಪ್ ಅವರು ಕಟು ಪದಗಳನ್ನು ಬಳಸಿದ್ದಾರೆ ಮತ್ತು ಸರ್ವೋಚ್ಚ ನಾಯಕ ಎಂದು ಕರೆಯಲ್ಪಡುವವರು ಎಲ್ಲಿ ಅಡಗಿದ್ದಾರೆಂದು ಎಂದು ತಿಳಿದಿದೆ ಅವರು ನಮಗೆ ಸುಲಭದ ಗುರಿಯಾಗಿದ್ದಾರೆ ಆದರೆ ಅವರು ಈಗ ಸುರಕ್ಷಿತರಾಗಿದ್ದಾರೆ. ಈಗ ಸಧ್ಯಕ್ಕೆ ನಾವು ಅವರನ್ನು ಕೊಲ್ಲಲು ಹೋಗುತ್ತಿಲ್ಲ. ಆದರೆ ನಾಗರಿಕರ ಮೇಲೆ ಕ್ಷಿಪಣಿ ದಾಳಿ ನಡೆಯಬಾರದು ಮತ್ತು ಅಮೇರಿಕನ್ ಸೈನಿಕರು ಗುರಿಯಾಗಿರಬಾರದು ಎಂದು ನಾವು ಬಯಸುತ್ತೇವೆ. ನಮ್ಮ ತಾಳ್ಮೆ ಮುಗಿಯುತ್ತಿದೆ ಎಂದು ತಿಳಿಸಿದ್ದಾರೆ.
ವರದಿ ಪ್ರಕಾರ ಕಳೆದ ಮೂರು ದಿನಗಳಲ್ಲಿ ಕನಿಷ್ಠ 30 ಯುಎಸ್ ಮಿಲಿಟರಿ ವಿಮಾನಗಳನ್ನು ಯುಎಸ್ ನೆಲೆಗಳಿಂದ ಯುರೋಪ್ಗೆ ಕಳುಹಿಸಲಾಗಿದೆ ಎಂದು ಹೇಳಿದೆ. ಇವೆಲ್ಲವೂ ಯುದ್ಧ ವಿಮಾನಗಳು ಮತ್ತು ಬಾಂಬರ್ಗಳಿಗೆ ಇಂಧನ ತುಂಬಲು ಬಳಸುವ ಯುಎಸ್ ಮಿಲಿಟರಿ ಟ್ಯಾಂಕರ್ ವಿಮಾನಗಳಾಗಿವೆ.
ಆದರೆ ಟ್ರಂಪ್ ಅವರ ಬೆದರಿಕೆಗಳನ್ನು ಲೆಕ್ಕಿಸದೆ, ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಕ್ರಿಸ್ಮಸ್ ದಿನದಂದು ಅಮೆರಿಕ ಮತ್ತು ಇಸ್ರೇಲ್ಗೆ ಸೂಕ್ತ ಉತ್ತರ ನೀಡಿದ್ದಾರೆ ಮತ್ತು ಉನ್ನತ ಜನರಲ್ಗಳು ಮತ್ತು ವಿಜ್ಞಾನಿಗಳ ಮರಣದ ಹೊರತಾಗಿಯೂ ಯುದ್ಧವನ್ನು ಸಾರಿದ್ದಾರೆ.
ಅಲಿ ಖಮೇನಿ ಅವರು ತಮ್ಮ ಮೊದಲ ಟ್ವೀಟ್ನಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಬರೆದಿದ್ದಾರೆ. ಅಂದರೆ, ಯುದ್ಧ ಈಗ ಪ್ರಾರಂಭವಾಗಿದೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಹೈಪರ್ಸಾನಿಕ್ ಕ್ಷಿಪಣಿಗಳ ದಾಳಿ ಮಾಡುವ ಮೂಲಕ ಇರಾನ್ ಇಸ್ರೇಲ್ ನಾಶಕ್ಕೆ ಸಿದ್ದವಾಗಿದೆ. ಇಸ್ರೇಲ್ ಮೇಲಿನ ಇತ್ತೀಚಿನ ದಾಳಿಯ ಸಮಯದಲ್ಲಿ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ಇರಾನ್ನ ಕ್ರಾಂತಿಕಾರಿ ಗಾರ್ಡ್ ಕಾಪ್ರ್ಸ್ ಬುಧವಾರ ಹೇಳಿದೆ. ಎರಡೂ ದೇಶಗಳ ನಡುವಿನ ಹೋರಾಟ ಆರನೇ ದಿನಕ್ಕೆ ಪ್ರವೇಶಿಸಿದೆ. ಇಸ್ರೇಲ್ ವಾಯುಪಡೆಯು ಟೆಹ್ರಾನ್ನ ಹಲವಾರು ಪ್ರದೇಶಗಳನ್ನು ಮತ್ತೆ ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ.