
ನವದೆಹಲಿ,ಆ.೨೪- ಬಿಹಾರ ಮತದಾರರ ಪಟ್ಟಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದ್ದು ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ತನಿಖೆಗೆ ಕೈಗೆತ್ತಿಕೊಂಡಿದೆ.
ವೀಸಾ ಅವಧಿ ಮುಗಿದ ನಂತರ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳ ಬಗ್ಗೆ ಗೃಹ ಸಚಿವಾಲಯ ನಡೆಸಿದ ತನಿಖೆಯ ಸಮಯದಲ್ಲಿ ಹೆಸರುಗಳು ಬೆಳಕಿಗೆ ಬಂದಿವೆ. ಈ ಇಬ್ಬರು ಮಹಿಳೆಯರನ್ನು ಭಾಗಲ್ಪುರ ಜಿಲ್ಲೆಯಲ್ಲಿ ಮತದಾರರಾಗಿ ನೋಂದಾಯಿಸಲಾಗಿದೆ.
೧೯೫೬ ರಲ್ಲಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನದ ಇಬ್ಬರು ಮಹಿಳೆಯರನ್ನು ಬಿಹಾರದಲ್ಲಿ ಮತದಾರರಾಗಿ ಪಟ್ಟಿ ಮಾಡಲಾಗಿದೆ ಮತ್ತು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ ಪರಿಶೀಲಿಸಿದ ವೇಳೆ ಈ ಪ್ರಕರಕಣ ಬೆಳಕಿಗೆ ಬಂದಿದೆ.
ಭಾಗಲ್ಪುರ ಜಿಲ್ಲೆಯಲ್ಲಿ ಈ ಇಬ್ಬರು ಮಹಿಳೆಯರನ್ನು ಗುರುತಿಸಲಾಗಿದೆ. ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ ಮತ್ತು ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಲು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಬೂತ್ ಮಟ್ಟದ ಅಧಿಕಾರಿ ಫರ್ಜಾನಾ ಖಾನಮ್ ಮಾತನಾಡಿ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಪಾಸ್‌ಪೋರ್ಟ್ ಸಂಖ್ಯೆಗಳೊಂದಿಗೆ ಪತ್ರ ಬಂದಿತ್ತು ಅದನ್ನು ಪರಿಶೀಲಿಸಿದ ವೇಳೆ ಪಾಕಿಸ್ತಾನದ ಪ್ರಜೆಗಳು ಎನ್ನುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ.
ಅವರ ಪಾಸ್‌ಪೋರ್ಟ್ ೧೯೫೬ ರದ್ದಾಗಿದ್ದು, ಅವರಿಗೆ ೧೯೫೮ ರಲ್ಲಿ ವೀಸಾ ಸಿಕ್ಕಿತು. ಅವರು ಪಾಕಿಸ್ತಾನದವರು ತನಿಖೆಯಿಂದ ತಿಳಿದು ಬಂದಿದೆ ಎಂದು ಭಾಗಲ್ಪುರ ಡಿಎಂ ನವಲ್ ಕಿಶೋರ್ ಚೌಧರಿ ಇಳಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನ ಬಿಹಾರ ಮತದಾರರ ಪಟ್ಟಿಯಿಂದ ‘ಅನರ್ಹ ಮತದಾರರನ್ನು ತೆಗೆದುಹಾಕಲು ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುತ್ತಿದೆ. ಬಿಜೆಪಿಯ ಆದೇಶದ ಮೇರೆಗೆ ಚುನಾವಣಾ ಸಂಸ್ಥೆ ಪಟ್ಟಿಯಿಂದ ಆಯ್ದ ಜನರನ್ನು ತೆಗೆದುಹಾಕುತ್ತಿದೆ ಎಂದು ವಿರೋಧ ಪಕ್ಷಗಳು ಹೇಳಿಕೊಂಡಿದ್ದರಿಂದ ಈ ಕಾರ್ಯವು ಸಾಕಷ್ಟು ಟೀಕೆಗೆ ಗುರಿಯಾಗಿದೆ.
‘ಮತದಾರ ಅಧಿಕಾರ ಯಾತ್ರೆ
ಚುನಾವಣಾ ಆಯೋಗದ ವಿರುದ್ಧ ತೀವ್ರ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಲೋಪ್ ರಾಹುಲ್ ಗಾಂಧಿ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಜನರ ಮತದಾನದ ಹಕ್ಕುಗಳನ್ನು ‘ರಕ್ಷಿಸಲು’ ‘ಮತದಾರ ಅಧಿಕಾರ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ, ಅವರೊಂದಿಗೆ ಆರ್‍ಜೆಡಿ ನಾಯಕಿ ತೇಜಸ್ವಿ ಯಾದವ್ ಕೂಡ ಸೇರಿಕೊಂಡಿದ್ದಾರೆ.
ರಾಹುಲ್ ತಮ್ಮ ಯಾತ್ರೆಯ ಸಮಯದಲ್ಲಿ ೧೩೦೦ ಕಿಮೀ ದೂರ ಮತ್ತು ೨೩ ಜಿಲ್ಲೆಗಳನ್ನು ಕ್ರಮಿಸಿದ್ದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.