ಬಿಎಲ್ ಶಂಕರ್ ಚಿತ್ರಕಲಾ ಪರಿಷತ್‍ಗೆ ಅಧ್ಯಕ್ಷರಾಗಿ ಮರು ಆಯ್ಕೆ

ಬೆಂಗಳೂರು: ಜೂ.22:- ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಇತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಮತ್ತೆ ಡಾ.ಬಿ.ಎಲ್.ಶಂಕರ್ , ಪ್ರಭಾಕರ್ ಟಿ. ಹಾಗೂ ಪೆÇ?ರ.ಅಪ್ಪಾಜಯ್ಯ ಕೆ.ಎಸ್ ಉಪಾಧ್ಯಕ್ಷರುಗಳಾಗಿ, ಡಾ.ಎನ್.ಲಕ್ಷ್ಮೀಪತಿ ಬಾಬು ಖಜಾಂಚಿಯಾಗಿ ಹಾಗೂ ಎಸ್.ಎನ್.ಶಶಿಧರ್ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ.


ಜಂಟಿ ಕಾರ್ಯದರ್ಶಿಗಳಾಗಿ ತಾರಕೇಶ್ವರಿ ಟಿ.ವಿ., ಸುಬ್ರಮಣ್ಯ ಕುಕ್ಕೆ, ಬಿ.ಎಲ್.ಶ್ರೀನಿವಾಸ ಹಾಗೂ ಟಿ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಬಿ.ವೈ.ವಿನೋದ, ರಮಾ ಶರ್ಮಾ, ಅಮ್ರಿತ ವಿಮಲನಾಥನ್.ಎಸ್., ಡಾ.ಲಕ್ಷ್ಮಿಪತಿ ಜಿ., ಬಾಳಾಸಾಬ ಸದಲಗೆ ಮತ್ತು ಸಿ.ಪಿ.ಉಷಾರಾಣಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಪವನ್ ಕುಮಾರ್ ಘೋಷಿಸಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಹುದ್ದೆಗಳ ಚುನಾವಣೆ ಇದೇ ತಿಂಗಳ 29ರಂದು ನಿಗದಿಯಾಗಿತ್ತು ಆದರೆ, ಪ್ರತಿಸ್ಪರ್ಧಿಗಳು ಸ್ಪರ್ಧೆಯಿಂದ ಹಿಂದೆ ಸರಿದು. ಆಯ್ಕೆಯಾಗಬೇಕಾದ ಸ್ಥಾನಗಳಿಗೆ ಸಮಾನವಾಗಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರಿಂದ ಎಲ್ಲ 15 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ .