
ಬೆಂಗಳೂರು, ಅ. ೧೬- ಸಚಿವ ಪ್ರಿಯಾಂಕ ಖರ್ಗೆ ರವರು ಆರ್,ಎಸ್,ಎಸ್.ನ ಬೈಠಕ್ ನಂತಹ ಸಮಾವೇಶಗಳು ಹಾಗೂ ಚಟುವಟಿಕೆಗಳನ್ನ ಸರ್ಕಾರಿ ಶಾಲೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧಿಸಬೇಕೆಂಬ ದಿಟ್ಟ ನಿರ್ಧಾರದ ಹೇಳಿಕೆಯನ್ನ ಸ್ವಾಗತಿಸಿ ಅವರಿಗೆ ನೈತಿಕ ಬೆಂಬಲವನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಿಯೋಗ ಸಚಿವರನ್ನು ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲ ನೀಡಿದರು.
ನಗರದ ರೇಸ್‌ಕೋರ್ಸ್ ರಸ್ತೆಯ ಸಚಿವರ ಸರ್ಕಾರಿ ಬಂಗಲೆಯಲ್ಲಿ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಾ ಸಂಘದ ಚಟುವಟಿಕೆಗಳನ್ನ ಸರ್ಕಾರಿ ಹಾಗೂ ಶಾಲೆಗಳ ಆವರಣದಲ್ಲಿ ನಡೆಸಬಾರದು ಎಂಬುವ ಶ್ರೀ ಪ್ರಿಯಾಂಕ ಖರ್ಗೆ ರವರ ಹೇಳಿಕೆಯ ವಿರುದ್ಧ ಭಾರತೀಯ ಜನತಾ ಪಕ್ಷದ ಅನೇಕ ನಾಯಕರು ಹಾಗೂ ಆರ್ ಎಸ್ ಎಸ್ ನ ಬೆಂಬಲಿಗರು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ. ಟೀಕಿಸುವ ನೈತಿಕತೆ ಅವರಿಗಿದೆ ಆದರೆ ಟೀಕಿಸುವ ಬರದಲ್ಲಿ ಅವರನ್ನ ಹೆದರಿಸಿ ಅವರನ್ನ ಬೆದರಿಸುವ ತಂತ್ರವು ಎಂದಿನಂತೆ ಈಗ ಮತ್ತೆ ಮುಂದುವರಿಯುತ್ತಿದೆ,
ಆರ್ ಎಸ್ ಎಸ್ ನ ಹೆಸರಿನಲ್ಲಿ ಅಥವಾ ಆರ್ ಎಸ್ ಎಸ್ ಕಾರ್ಯಕರ್ತರೇ ನೇರವಾಗಿ ಬಂದು ಹೆದರಿಸಬೇಕು ವಾಮ ಮಾರ್ಗದಲ್ಲಿ ರಣಹೇಡಿಗಳಂತೆ ಹೆದುರಿಸುವುದು ಅವರ ಶಕ್ತಿ ಅವರ ಯೋಗ್ಯತೆ ಏನೆಂಬುದು ತೋರುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಹೆದುರಿಸುವ ಶಕ್ತಿ ಹಾಗೂ ಸಾಮರ್ಥ್ಯ ಆರ್ ಎಸ್ ಎಸ್ ಗೆ ಹಾಗೂ ಬಿಜೆಪಿಗೆ ಇಲ್ಲ ಎಂಬುದು ಈಗ ತಿಳಿದಿದೆ,
ದೂರವಾಣಿ ಮೂಲಕ ಅವರಿಗೆ ಬೆದರಿಕೆ ಹಾಕಿ ಅವಚ್ಯ ಹಾಗೂ ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಅಂತಹ ಅವಾಚ್ಯ ಶಬ್ದಗಳನ್ನು ಬಳಸಿರುವುದನ್ನು ಆರ್‌ಎಸ್‌ಎಸ್ ತರಬೇತಿ ಶಾಲೆಯಲ್ಲಿ ತರಬೇತಿ ನೀಡಿದ್ದಾರೆಯೇ ಎಂಬುದನ್ನು ಆರ್ ಎಸ್ ಎಸ್ ನಾಯಕರೇ ಈಗ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಕಾರ್ಯಕರ್ತರು ಅವರ ಬಳಿ ತೆರಳಿ ಶ್ರೀ ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ನೀಡಿ ಸಂವಿಧಾನದ ಬಗ್ಗೆ ಪ್ರಜಾಪ್ರಭುತ್ವದ ಬಗ್ಗೆ ನಿಮ್ಮ ಗಟ್ಟಿ ಧ್ವನಿಯನ್ನು ಹೆಚ್ಚಿನ ರೀತಿ ಮೊಳಗಿಸಿ ಎಂದು ಅವರಿಗೆ ನೈತಿಕ ಬೆಂಬಲವನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಗುಂಡಾಗಳಂತೆ ವರ್ತನೆ ಮಾಡುತ್ತಿರುವ ಗೂಂಡಾಗಳ ವಿರುದ್ಧ ಅಗತ್ಯ ಕಠಿಣ ಕಾನೂನು ಕ್ರಮ ಸಹ ಸರ್ಕಾರ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಕುಶಾಲ್ ಅರುವೆಗೌಡ, ನವೀನ್, ಪ್ರಕಾಶ್, ಸುಂಕದಕಟ್ಟೆ, ಉಮೇಶ್, ಪುಟ್ಟರಾಜು,ಆನಂದ್, ಓಬಳೇಶ್, ಚಿನ್ನಿ ಪ್ರಕಾಶ್, ಪ್ರವೀಣ್ ರಾವ್,