
ಬಳ್ಳಾರಿ, ಮಾ.15: ಕನ್ನಡ ಚಿತ್ರರಂಗದ ದಿವಂಗತ ನಟ ಪುನೀತ್ ರಾಜಕುಮಾರ್ ಅವರ 51ನೇ ಜನ್ಮದಿನಾಚರಣೆ ಅಂಗವಾಗೊ ಇಂದು ಇಲ್ಲಿನ ಡಾ. ರಾಜಕುಮಾರ ರಸ್ತೆಯ ಜನತಾ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಮತ್ತು ಮುಗುಳುನಗೆ ಫೌಂಡೇಷನ್ ನಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಸ್. ಸುರೇಶ್ ಮಾತನಾಡಿ, ನಟ ಪುನೀತ್ ರಾಜಕುಮಾರ್ ಈ ನಾಡಿಗೆ ನೀಡಿದ ಕೊಡುಗೆ ಅಪಾರ ಅವರ 51ನೇ ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಂಡಿರುವ ವಿಷಯವಾಗಿದೆ. ರಕ್ತದಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ಎಲ್ಲಾ ಆರೋಗ್ಯವಂತ ಯುವಕರು ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಎಂದರು.
ಈ ಸಂದರ್ಭದಲ್ಲಿ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಚ್ಎಸ್ ನರಸಿಂಹರಾಜು, ಅಶೋಕ್ ಬಡಿಗೇರ್, ಜಿಲ್ಲಾ ಯುವ ಘಟಕ ಅಧ್ಯಕ್ಷ ವಿ ಎಸ್ ಸಾಗರ್ ಅಪ್ಪು, ಜಿಲ್ಲಾ ಉಪಾಧ್ಯಕ್ಷ ಮೋಹನ್ ನಗರ ಯುವ ಘಟಕ ಅಧ್ಯಕ್ಷ ಸಮಿದ್ ಅಲಿ ಕಾವಲು ಪಡೆಯ ಯುವ ಮುಖಂಡ ಅನಿಲ್ ವಾಲ್ಮೀಕಿ ನಗರ ಯುವ ಘಟಕ ಉಪಾಧ್ಯಕ್ಷ ಶೇಕು ಮತ್ತು ಜನತಾ ನಗರ ನಿವಾಸಿಗಳಾದ ಲೋಕೇಶ್, ಮುಬಾರಕ್, ರವಿ, ವೀರೇಶ್, ಮನೋಜ್, ಅರವಿಂದ್, ಸಂಗಮೇಶ್ ಮೊದಲಾದವರು ಇದ್ದರು. 36 ಜನ ಯುವಕರು ರಕ್ತದಾನ ಮಾಡಿದರು.



























