
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.15: ಬಳ್ಳಾರಿಯ ವಿರಾಟ್ ನಗರದಲ್ಲಿ ಗುರುಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ (ರಿ) ಬಳ್ಳಾರಿ ಇವರಿಂದ ಪದ್ಮಭೂಷಣ ಡಾ.ಪಂಡಿತ ಪಟ್ಟರಾಜ ಕವಿ ಗವಾಯಿಗಳವರ ಜಯಂತಿ ಪ್ರಯುಕ್ತ
… ಗಾನ ತರಂಗ್….ಎನ್ನುವ ಸಂಗೀತ ಕರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕಿ ಶ್ರೀಮತಿ.. ಸುಶೀಲಾ ಶಿರೂರು ಉದ್ಘಾಟಿಸಿ ಮಾತನಾಡುತ್ತಾ, ಗವಾಯಿಗಳವರು ಅಂಧರಾದರೂ ಸಂಗೀತ ಪ್ರಪಂಚಕ್ಕೆ ಅಂಧ ಅನಾಥರ ಬಾಳಿಗೆ ಗಾನ ಗಂಧರ್ವರಾದರು ಅವರು ಪ್ರಪಂಚಕ್ಕೆ ನೀಡಿದ ಸಂಗೀತ ದಾಸೋಹ ಅನ್ನದಾಸೋಹ ಸಾಹಿತ್ಯ ದಾಸೋಹ ದೊಂದಿಗೆ ಸಂಸ್ಕೃತ ಕನ್ನಡ ಹಿಂದಿ ಭಾಷೆಗಳಲ್ಲಿ ಪುರಾಣರ ಚಿಸಿ ತ್ರಿಭಾಷಾ ಕವಿಗಳಾಗಿ ಪದ್ಮಭೂಷಣ ಪ್ರಶಸ್ತಿ ಪಡೆದು ಪರೋಪಕಾರ ಜೀವನದಲ್ಲಿ ನಿಜಸುಖವಿದೆ ಎಂದು ತೋರಿಸಿಕೊಟ್ಟ ಮಹಾನ್ ಚೇತನ ಪುಟ್ಟರಾಜ ಗುರುವರ್ಯರು ಅವರ ಜೀವನ ಚರಿತ್ರೆ ಯುಗಯುಗಾಂತರ ಕಳೆದರೂ ಅಳಿಸಲಾಗದಂತಹ ಕಲಾವಿದರನ್ನು ಶಿಷ್ಯ ಬಳಗವನ್ನು ನಾಡಿಗೆ ನೀಡಿದ್ದಾರೆ ಅವರ ಸಂಸ್ಕೃತಿ ಸಂಸ್ಕಾರ ನಮಗೆ ಆದರ್ಶಪ್ರಾಯಎಂದರು
ಅದ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಗಳಾದಎನ್.ಡಿ ಯಂಕಮ್ಮ ಮಾತನಾಡಿ
ಸಂಗೀತ ಸಾಹಿತ್ಯದಿಂದ ಮನಸ್ಸು ಜಾಗೃತವಾಗಿ ಚಿಂತೆ ದೂರವಾಗಿ ಚಿಂತನೆ ಹೆಚ್ಚಾಗುತ್ತದೆ ಇದರಿಂದ ಮಾತೃಹದಯ ವೆಕ್ತಿತ್ವ ಅಳವಡಿಸಿಕೊಂಡು ಗುರುಶಿಷ್ಯರ ಸಂಬಂಧ ಪರಂಪರೆ ಬೆಳೆಯುತ್ತಾ ಹೋಗುತ್ತದೆ
ವಿಶ್ವಮಹಿಳಾದಿನಾಚರಣೆ ಶುಭಾಶಯದೊಂದಿಗೆ ಸ್ತ್ರಿಯರು ತಮ್ಮ ಹೆಣ್ಣು ಮಕ್ಕಳನ್ನ ಸಂಗೀತ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೊತ್ಸಾಹಿಸಿ ನಾಡಿನ ಶಿಲ್ಪಿಗಳಾಗಿ ಮಾಡುವ ತಾಯಂದಿರ ಮುಖ್ಯ ಜವಬ್ದಾರಿ ಎಂದರು. . ಅತಿಥಿಗಳಾಗಿ
ಹೆಚ್ ತಿಪ್ಪೇಸ್ವಾಮಿ ಮುದ್ದಟನೂರು ದೊಡ್ಡ ಬಸವ ಗವಾಯಿ ಭಾಗವಹಿಸಿದ್ದರು. ಸಂಗೀತ ಕಾರ್ಯಕ್ರಮವನ್ನ ವೀರೇಶ ದಳವಾಯಿ ಹಾಗೂ ಹುಸೇನಪ್ಪ ಅರಳಿಗೆ ನೂರು ಇವರು ನಡೆಸಿಕೊಟ್ಟರು ಯರೆಗೌಡ ಗಣಿಕೆಹಾಳು ನಬಿಸಾಬ್ ಕಗ್ಗಲ್ಲು ಶ್ರೀಮತಿಸರಸ್ವತಿ ಬಳ್ಳಾರಿ
ಕವಿತಾ ಕಗ್ಗಲ್ಲು ಭಾಗವಹಿಸಿದ್ದರು. ಪಾಠಶಾಲೆ ಅನೇಕ ಮಕ್ಕಳಿಂದ ವಚನ ಗಾಯನ ಕಾರ್ಯಕ್ರ ಮನೆರವೇರಿತು ತಬಲಾ ವಾದನ ವೀರೇಶ್ ಕುರುಗೋಡು ನಡೆಸಿಕೊಟ್ಟರು
ಪಂಚಾಕ್ಷರಿ ವಂದಿಸಿದರು. ಚಾಂದ್ ಭಾಷ ನಿರೂಪಣೆ ನಡೆಸಿಕೊಟ್ಟರು



























