ಬೇಕಾಗುವ ಸಾಮಗ್ರಿಗಳು
4 ಬೇಯಿಸಿದ ಆಲೂಗಡ್ಡೆ, 2 ಈರುಳ್ಳಿ ಅರ್ಧ ಕಪ್ ಹೂಕೋಸು, 1 ಕಪ್ ಬಟಾಣಿ
3 ಚಮಚ ಎಣ್ಣೆ, ರುಚಿಗೆ ತಕ್ಕ ಉಪ್ಪು
8 ಪಾವ್, 2 ಚಮಚ ಬೆಳ್ಳುಳ್ಳಿ ಪೇಸ್ಟ್ ಕಾಲು ಕಪ್ ಬೀನ್ಸ್
4 ಸಾಧಾರಣ ಗಾತ್ರದ ಟೊಮೆಟೊ
1 ಕ್ಯಾಪ್ತಿಕಂ, ಕಾಲು ಕಪ್ ಕ್ಯಾರೆಟ್ ಅರ್ಧ ಚಮಚ ಶುಂಠಿ ಪೇಸ್ಟ್
2 ಹಸಿ ಮೆಣಸಿನಕಾಯಿ, 25 ಗ್ರಾಂ ಬೆಣ್ಣೆ
1 ನಿಂಬೆ, 2 ಚಮಚ ಪಾವ್ ಬಾಜಿ ಮಸಾಲ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಬಟಾಣಿ, ಹೂಕೋಸು, ಕ್ಯಾರೆಟ್, ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ನಂತರ ನೀರು ಬಸಿದು, ಆ ತರಕಾರಿ ಜತೆ ಬೇಯಿಸಿದ ಆಲೂಗಡ್ಡೆ ಸೇರಿಸಿ ಸೌಟ್ ಬಳಸಿ ಮ್ಯಾಶ್ ಮಾಡಿ.
ಈಗ ಪ್ಯಾನ್ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ, ನಂತರ ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ಪಾವ್ ಭಾಜಿ ಮಸಾಲ ಸೇರಿಸಿ, ಕ್ಯಾಪ್ತಿಕಂ ಹಾಕಿ 2-3 ನಿಮಿಷ ಪ್ರೈ ಮಾಡಿ.
ಈಗ ಕತ್ತರಿಸಿದ ಟೊಮೆಟೊ ಹಾಕಿ 3 ನಿಮಿಷ ಪ್ರೈ ಮಾಡಿ. ಈಗ ಮ್ಯಾಶ್ ಮಾಡಿದ ತರಕಾರಿ ಹಾಕಿ ಒಂದೂವರೆ ಕಪ್ ನೀರು, ರುಚಿಗೆ ತಕ್ಕ ಉಪ್ಪು ಸೇರಿಸಿ 10 ನಿಮಿಷ ಕಡಿಮೆ ಉರಿಯಲ್ಲಿ ಬೇಯಸಿ. ಆಗಾಗ ಸೌಟ್ ನಿಂದ ತರಕಾರಿಯನ್ನು ಮತ್ತಷ್ಟು ಮ್ಯಾಶ್ ಮಾಡಿ. ಇಷ್ಟು ಮಾಡಿದರೆ ಭಾಜಿ ರೆಡಿ. ಈಗ ಬೆಣ್ಣೆಯನ್ನು ದಪ್ಪ ತಳವಿರುವ ತವಾಕ್ಕೆ ಹಾಕಿ ಬಿಸಿ ಮಾಡಿ ಅದರಲ್ಲಿ ಪಾವ್‍ನ ಎರಡೂ ಬದಿ ಸ್ವಲ್ಪ ರೋಸ್ಟ್ ಮಾಡಿ.
ಈಗ ಬಿಸಿ-ಬಿಸಿ ಇರುವ ಭಾಜಿಗೆ ಸ್ವಲ್ಪ ನಿಂಬೆರಸ ಹಾಕಿ, ಸ್ವಲ್ಪ ಬೆಣ್ಣೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪಾವ್ ಜತೆ ಸರ್ವ್ ಮಾಡಿ.
























