Home ಜಿಲ್ಲೆ ”ಪಾಂಡು ವಿಜಯ”ಅರ್ಥಾತ್ ಕೀಚಕನ ವದೆ  ಬಯಲಾಟ ಪ್ರದರ್ಶನ

”ಪಾಂಡು ವಿಜಯ”ಅರ್ಥಾತ್ ಕೀಚಕನ ವದೆ  ಬಯಲಾಟ ಪ್ರದರ್ಶನ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.15: ಬಂಡ್ರಾಳ್ ಗ್ರಾಮದಲ್ಲಿ ಶ್ರೀ ಪೊಂಪಯ್ಯ ತಾತನವರ  34ನೇ ಪುಣ್ಯ ಸ್ಮರಣೆ, ಅಂಗವಾಗಿ ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ ವತಿಯಿಂದ, ಬಂಡ್ರಾಳ್ ಗ್ರಾಮದ  ಸದ್ಭಕ್ತ ರಿಂದ ಪಾಂಡು ವಿಜಯ ಅರ್ಥಾತ್ ಕಿಚಕನ ವದೆ ಬಯಲಾಟ ನಾಟಕ ನೆಡೆಯಿತು

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಬಂಡ್ರಾಳ್ ಎಂ ಮೃತ್ಯುಂಜಯ ಸ್ವಾಮಿ ವಕೀಲರು ವಹಿಸಿದ್ದರು  ಅವರು ಮಾತನಾಡಿ ಬೈಲಾಟ ಬಳ್ಳಾರಿ ಜಿಲ್ಲೆಯ ಗಂಡು ಮೆಚ್ಚಿನ ಕಲೆಯಾಗಿದ್ದು, ಬೈಲಾಟಗಳಿಗೆ ಸಮಾಜವನ್ನು ತಿದ್ದುವ ಶಕ್ತಿ ಇದೆಶಕ್ತಿ ಇದೆ, ಬೈಲಾಟಗಳ ಮೂಲಕ ಹಲವಾರು ಗ್ರಾಮೀಣ ಭಾಗದ ಅನಕ್ಷರಸ್ಥ ಪ್ರತಿವಾಂತ ಕಲಾವಿದರು ಬೈಲಾಟಗಳನ್ನು ಕಲಾವಿದರಾಗಿ ಹೊರಹೊಮ್ಮಿದ್ದಾರೆ, ಸರ್ಕಾರ ಬಯಲಾಟ ಕಲಾವಿದರಿಗೆ  ಪ್ರೋತ್ಸಾಹಿ ಕೊಡಬೇಕು  ಶ್ರೀ ಪೊಂಪಯ್ಯತಾತನವರ ಪುಣ್ಯಸ್ಮರಣೆ ಅಂಗವಾಗಿ  ಬಯಲಾಟ ನೆಡೆದಿರುವು ನಮಗೆ ಸಂತಸವಾಗಿದೆ ಎಂದು ತಿಳಿಸಿದರು, ಕಾರ್ಯಕ್ರಮವನ್ನು ಆರ್ ಸದಾಶಿವ ಸಮಾಜ ಸೇವಕರು ಉದ್ಯಮಿದಾರರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಇವರು ಮಾತನಾಡಿ ಬೈಲಾಟಗಳು ಮಹಾಭಾರತ ಮತ್ತು ರಾಮಾಯಣದಂತ ಇತಿಹಾಸವುಳ್ಳ ಕಥೆಗಳನ್ನು ಹೊಂದಿದ್ದು ಇವುಗಳು ಪ್ರಸ್ತುತ ದಿನಮಾನದಲ್ಲಿ ಜನರ ಮೇಲೆ ಬಹಳ ಪ್ರಭಾವ ಬಿರುತ್ತವೆ  ಎಲ್ಲರೂ ಬೈಲಾಟಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಕಲೆಯನ್ನು ಉಳಿಸಿ,ಬೆಳೆಸಬೇಕಾಗಿದೆ ಎಂದರು ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ನರಸಿಂಹ ಜೋಶಿ ಮತ್ತು ವೆಂಕಟೇಶ್ ಅವರು ಭಾಗವಹಿಸಿದ್ದರು ಊರಿನ ಪ್ರಮುಖರಾದ  ಮರೆಗೌಡ ತಾ ಪಂಚಾಯತ್ ಸದಸ್ಯರಾದ ಮಾಜಿ ಸದಸ್ಯರು, ಹನುಮಯ್ಯ,ಸಣ್ಣಪ್ಪ ದಬಾಡಿ ಮಲ್ಲಯ್ಯ, ವೆಂಕಟೇಶ್ ರೆಡ್ಡಿರು ಬಸವರಾಜ್ ಮುಂತಾದವರು ಭಾಗವಹಿಸಿದ್ದರು