Home ಜಿಲ್ಲೆ ಮಂಗಳೂರು ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ ಯತ್ನ

ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ ಯತ್ನ

ಪುತ್ತೂರು: ಪತಿ ಮತ್ತು ಪತ್ನಿಯ ನಡುವೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಪುತ್ತೂರಿನ ಅರಿಯಡ್ಕ ಎಂಬಲ್ಲಿ ನಡೆದಿದೆ. ಇಲ್ಲಿನ ಅರಿಯಡ್ಕ ಗ್ರಾಮದ ಕಟ್ಟತ್ತಾರು ಗೋಳ್ತಿಲ ಎಂಬಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಕುಮಾರಮಂಗಲದ ನಿವಾಸಿ ಸಾವಿತ್ರಿ (೪೨) ಮೃತಪಟ್ಟಿದ್ದಾರೆ.
ಪತ್ನಿ ಸಾವಿಗೀಡಾಗಿರುವುದನ್ನು ಕಂಡು ತಕ್ಷಣ ಕತ್ತಿಯಿಂದ ತನ್ನ ಕತ್ತನ್ನು ಕೊಯ್ದಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಪತಿ ಎಮೆಟ್ಟಿ ನಿವಾಸಿ ಪುರುಷೋತ್ತಮ ಯಾನೇ ಭೈರಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ-ಪತ್ನಿಯ ನಡುವಿನ ಈ ಗಲಾಟೆಗೆ ಕಾರಣ ತಿಳಿದುಬಂದಿಲ್ಲ. ಪುತ್ತೂರು ಗ್ರಾಮಾಂತರ ಸಂಪ್ಯಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.