ಭ್ರೂಣ ಹತ್ಯೆಯ ನೈಜಘಟನೆ ಕಥಾಹಂದರದ ‘ ಕುಂಭಸಂಭವ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರ ಇತ್ತೀಚೆಗೆ ನೆರವೇರಿತು. ಪರಿಪೂರ್ಣ ಸನಾತನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಂಸ್ಥಾಪಕರಾದ ಗುರೂಜಿ ಡಾ. ಶ್ರೀ ಎ. ವಿ. ಶ್ರೀನಿವಾಸನ್ ‘ಕುಂಭ ಸಂಭವ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಮಂಡ್ಯ ಬಳಿ ನಡೆದ ನೈಜಘಟನೆ ಆಧರಿಸಿದ ಕಥಾಹಂದರ ಹೊಂದಿದೆ. ಯಾರು ಕೂಡ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯತ್ತಿದೆ. ಅಂದುಕೊಂಡಂತೆ ಆದರೆ ಅಕ್ಟೋಬರ್ ನಲ್ಲೇ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ. ಕನ್ನಡದ ಸಾಕಷ್ಟು ಅನುಭವಿ ಹಾಗೂ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.ಎಂದು ನಿರ್ದೇಶಕ ಟಿ.ಎನ್ ನಾಗೇಶ್ ತಿಳಿಸಿದರು .
ನನಗೆ ನಿರ್ದೇಶಕ ನಾಗೇಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿರುವ ಈ ಚಿತ್ರದಲ್ಲಿ ಅಭಿನಯಿಸಿರುವುದು ಬಹಳ ಖುಷಿಯಾಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಟಿ ಪ್ರಿಯ.
ಚಿತ್ರದ ನಿರ್ಮಾಪಕರಾದ ನಾಗಾ ನಾಯ್ಕ, ಪುರುಷೋತ್ತಮ, ಚಿತ್ರದಲ್ಲಿ ನಟಿಸಿರುವ ಶೋಭಿತ, ಮಧುಶ್ರೀ, ಆದಿದೇವ್ ಶಂಕರ್ ಅಶ್ವಥ್, ಅರ್ಜುನ್ ದೇವ್, ಕೋಟೆ ಪ್ರಭಾಕರ್, ವಿಜಯ್ ಚೆಂಡೂರ್, ಕಮಲ್, ಮುಬಾರಕ್, ಛಾಯಾಗ್ರಾಹಕ ಸಿದ್ದರಾಜು, ಸಂಕಲನಕಾರ ಆಕಾಶ್ ಮಹೇಂದ್ರಕರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ನಿಂಗರಾಜು ಮತ್ತು ವಲ್ಲಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.
ಮಿಲ್ಕಿ ಮೂನ್ ಮೂವೀಸ್ ಲಾಂಛನದಲ್ಲಿ ನಾಗ ನಾಯ್ಕ , ನರೇಶ್ ಕುಮಾರ್, ತಾರಾ.ಆರ್, ಸುನಂದ ಹಾಗು ಪುರುಷೋತ್ತಮ ಅವರ ನಿರ್ಮಾಣವಿದೆ.






























