ದಾಂಪತ್ಯಕ್ಕೆ ಕಾಲಿಟ್ಟ ಖ್ಯಾತ ನಿರೂಪಕಿ ಅನುಶ್ರೀ

ಬೆಂಗಳೂರು: ಕಿರುತೆರೆಯ ಜನಪ್ರಿಯ ನಿರೂಪಕಿ, ಚಲನಚಿತ್ರ ನಟಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕಗ್ಗಲಿಪುರದ ಸಂಭ್ರಮ ಸ್ವಾನ್ ಲೈನ್ ನಲ್ಲಿ ರೆಸಾರ್ಟ್ ನಲ್ಲಿ ನಡೆದಿದೆ. ಕೊಡಗಿನ ಮೂಲದ ಉದ್ಯಮಿ ರೋಷನ್ ಅವರನ್ನು ಅನುಶ್ರೀ ವರಿಸಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಈ ಮದುವೆಗೆ ಬಂದು ಆಶೀರ್ವದಿಸಿದ್ದಾರೆ.

ನಿನ್ನೆ ಹಳದಿ ಶಾಸ್ತ್ರದ ಕಾರ್ಯಕ್ರಮ ವರ್ಣ ರಂಜಿತವಾಗಿ ನಡೆದಿದ್ದು, ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವೈರಲಾಗಿದ್ದವು.
ಈಗಾಗಲೇ ಚೈತ್ರ ಆಚಾರ್ ನೆನಪಿರಲಿ ಪ್ರೇಮ್ ಸೋನಲ್ ಮಾಂತೋರೊ,ತರುಣ್ ಸುಧೀರ್,ಶರಣ್,ನಾಗಭೂಷಣ್, ತಾರಾ ಅನುರಾಧ, ಹೀಗೆ ಇನ್ನೂ ಅನೇಕ ಸ್ಯಾಂಡಲ್ ವುಡ್ ತಾರೆಯರ ದಂಡು ಹರಿದು ಬರುತ್ತಿದೆ.

ಕೆಲವು ವರ್ಷಗಳಿಂದ ಅನುಶ್ರೀ ಮದುವೆ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮದಲ್ಲಿ ಸುದ್ದಿ ಗಳು ಹರಿದಾಡುತ್ತಿತ್ತು. ಅನುಶ್ರೀ ಅವರನ್ನು ಮದುವೆಯಾಗುತ್ತಾರೆ ಇವರನ್ನು ಮದುವೆಯಾಗುತ್ತಾರೆ ಹೀಗೆ ಒಂದಷ್ಟು ಸುದ್ದಿಗಳು ಸದ್ದು ಮಾಡುತಿತ್ತು.ಪ್ರತಿ ಬಾರಿ ಮದುವೆ ಸುದ್ದಿ ಬಂದಾಗ ನಾನು ಮದುವೆಯಾದಾಗ ಅಧಿಕೃತವಾಗಿ ನಿಮಗೆಲ್ಲ ತಿಳಿಸುತ್ತೇನೆ ಎಂದು ಅನುಶ್ರೀ ನಕ್ಕು ಸುಮ್ಮನಾಗುತ್ತಿದ್ದರು.
ಆದರೆ ಕೊನೆಗೂ ಆಮಂತ್ರಣ ಪತ್ರವನ್ನು ನೀಡುವುದರ ಮೂಲಕ ತಾನು ಹಸೆ ಮನೆ ಏರಲಿರುವ ಸುದ್ದಿಯನ್ನು ಅಧಿಕೃತವಾಗಿ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದರು.

ಮಂಗಳೂರಿನಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ ಗಳಲ್ಲಿ, ಸ್ಥಳೀಯ ವಾಹಿನಿಗಳಲ್ಲಿ ನಿರೂಪಣಾ ವೃತ್ತಿ ಆರಂಭಿಸಿ ಜೀ ಕನ್ನಡದ ರಿಯಾಲಿಟಿ ಶೋ ನಡೆಸಿಕೊಂಡು ಕನ್ನಡಿಗರ ಮನೆ ಮಾತಾಗಿ ನಂಬರ್ ಒನ್ ಸ್ಟಾರ್ ನಿರೂಪಕಿಯಾಗಿ ಸುಮಾರು ವರ್ಷಗಳಿಂದ ಖ್ಯಾತಿ ಪಡೆದಿದ್ದರು.