
ವಾಷಿಂಗ್ಟನ್,ಅ,28- ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಷ್ಯಾ ಪ್ರವಾಸದಲ್ಲಿರುವಾಗಲೇ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸ್ಸು ಮಾಡುವ ದೇಶಗಳ ಸಾಲಿಗೆ ಜಪಾನ್, ಸೇರಿಕೊಂಡಿದೆ.
ಜಪಾನ್‍ನ ನೂತನ ಪ್ರಧಾನಿ ಆಗಿ ಆಯ್ಕೆಯಾಗಿರುವ ಸನೇ ತಕೈಚಿ ಅವರನ್ನು ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಅಭಿನಂಧಿಸಿದ್ದಾರೆ, ಈ ವೇಳೆ ಸನೈ ಸಕೈಚಿ ಅವರು ಮುಂದಿನ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ದೇಶ ನಾಮ ನಿರ್ದೇಶನ ಮಾಡಲಿದೆ ಎಂದು ಹೇಳಿದ್ದಾರೆ
ಈ ಕುರಿತು ಶ್ವೇತಭವನ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜಪಾನ್ ಪ್ರಧಾನಿ ಸನೈ ತಕೈಚಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಉನ್ನತ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎನ್ನುವುದನ್ನು ಖಚಿತಪಡಿಸಿದೆ.
ಟೋಕಿಯೊದ ಅಕಾಸಾಕಾ ಅರಮನೆಯಲ್ಲಿ ನಡೆದ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಸನೈ ತಕೈಚಿ ಸಭೆಯಲ್ಲಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಶಾಂತಿ ಒಪ್ಪಂದಗಳು ಮತ್ತು ಗಾಜಾ ಯುದ್ಧದಲ್ಲಿ ಕದನ ವಿರಾಮ ಸೇರಿದಂತೆ ಇನ್ನಿತರೆ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಮತ್ತು ಕ್ರಮಗಳನ್ನು ಜಪಾನ್ ಪ್ರಧಾನಿ ಸ್ವಾಗತಿಸಿದ್ದಾರೆ ಎಂದು ತಿಳಿಸಿದೆ.
ಜಪಾನ್ ಪ್ರಧಾನಿ ಅವರು ಅಮೆರಿಕಾ ಅಧ್ಯಕ್ಷರು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಕದನ ವಿರಾಮ ಒಪ್ಪಂದವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಸಾಧಿಸಿದ ಒಪ್ಪಂದ ಅಭೂತಪೂರ್ವ, ಐತಿಹಾಸಿಕ ಸಾಧನೆಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಪಾನ್ ಅನ್ನು ಏಷ್ಯಾದಲ್ಲಿ ಅಮೆರಿಕದ ಅತ್ಯಂತ ದೃಢ ಮಿತ್ರ ರಾಷ್ಟ್ರವೆಂದು ಪರಿಗಣಿಸಲಾಗಿದೆ.ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ಟೋಕಿಯೊ ಜೊತೆ ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.
ಗಾಜಾ ಯುದ್ಧ, ಭಾರತ-ಪಾಕಿಸ್ತಾನ, ಥೈಲ್ಯಾಂಡ್-ಕಾಂಬೋಡಿಯಾ ನಡುವಿನ ಸಂಘರ್ಷ ಸೇರಿದಂತೆ ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೊಂಡಿದ್ದಾರೆ.
ಈ ವರ್ಷ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲದಿದ್ದರೂ, ಇಸ್ರೇಲ್, ಪಾಕಿಸ್ತಾನ, ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಅನೇಕ ದೇಶಗಳು ಬಹಿರಂಗವಾಗಿ ಮುಂದಿನ ವರ್ಷಕ್ಕೆ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿವೆ.






























