ಜ. ೨೯ರಿಂದ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ೬೫ ದೇಶಗಳ ೨೨೫ ಚಿತ್ರಗಳ ಪ್ರದರ್ಶನ |

‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಧ್ಯೇಯವಾಕ್ಯ
ಸಿನಿಮಾ ಪ್ರೇಮಿಗಳ ನಿರೀಕ್ಷಿಸುತ್ತಿದ್ದ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಃIಈಈಇS) ಜನವರಿ ೨೯ರಿಂದ ಫೆಬ್ರವರಿ ೬, ೨೦೨೬ರವರೆಗೆ ನಡೆಯಲಿದೆ. ಜನವರಿ ೨೯ರಂದು ಸಂಜೆ ವಿಧಾನಸೌಧದ ಪೂರ್ವದ್ವಾರ ಮೆಟ್ಟಿಲುಗಳ ಬಳಿ ಭವ್ಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿರಲಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಹಾಗೂ ದೇಶ?ವಿದೇಶದ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ರಾಜಾಜಿನಗರದ ಲುಲುಮಾಲ್‌ನಲ್ಲಿರುವ ಸಿನೆಪೊಲಿಸ್‌ನ ೧೧ ಸ್ಕ್ರೀನ್‌ಗಳಲ್ಲಿ ಜನವರಿ ೩೦ರಿಂದ ಫೆಬ್ರವರಿ ೬ರವರೆಗೆ ಚಲನಚಿತ್ರ ಪ್ರದರ್ಶನಗಳು ನಡೆಯಲಿವೆ. ಇದರ ಜೊತೆಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಚಿತ್ರಗಳ ಪ್ರದರ್ಶನ ಇರಲಿದೆ.


೬೫ ದೇಶಗಳ ೨೨೫ ಚಿತ್ರಗಳು
ಈ ಬಾರಿ ೬೫ ದೇಶಗಳಿಂದ ಸುಮಾರು ೨೨೫ ಅತ್ಯುತ್ತಮ ಚಲನಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಇರಾನ್, ಜಪಾನ್, ಇಟಲಿ, ಪೋಲೆಂಡ್, ರಷ್ಯಾ, ಆಸ್ಟ್ರೇಲಿಯಾ, ಚೀನಾ ಸೇರಿದಂತೆ ಅನೇಕ ದೇಶಗಳ ಪ್ರಶಸ್ತಿ ಪಡೆದ ಚಿತ್ರಗಳು ‘ಸಮಕಾಲೀನ ವಿಶ್ವಸಿನಿಮಾ’ ವಿಭಾಗದ ಮೂಲಕ “ಬೆಂಗಳೂರಿನಲ್ಲಿ ಜಗತ್ತು” ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಳ್ಳಲಿವೆ.


‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ? ಈ ಬಾರಿ ಧ್ಯೇಯವಾಕ್ಯ
ಪ್ರತಿ ವರ್ಷವೂ ಅರ್ಥಪೂರ್ಣ ಧ್ಯೇಯವಾಕ್ಯ ಹೊಂದಿರುವ ಃIಈಈಇS, ಈ ಬಾರಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಪ್ರಸಿದ್ಧ ಗೀತೆಯ ಸಾಲು “ಸ್ತ್ರೀ ಎಂದರೆ ಅಷ್ಟೇ ಸಾಕೆ” ಅನ್ನು ಧ್ಯೇಯವಾಕ್ಯವಾಗಿ ಆಯ್ಕೆ ಮಾಡಿಕೊಂಡಿದೆ. ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಚಿತ್ರೋತ್ಸವ ನಡೆಯಲಿದೆ.
ಮಾಸ್ಟರ್‌ಕ್ಲಾಸ್, ಸಂವಾದ, ವಿಚಾರಸಂಕಿರಣ
ಚಿತ್ರೋತ್ಸವದ ಅವಧಿಯಲ್ಲಿ ಪ್ರತಿದಿನವೂ ಚಿತ್ರ ನಿರ್ಮಾಣ, ನಿರ್ದೇಶನ, ಕಥನ, ತಂತ್ರಜ್ಞಾನ ಹಾಗೂ ಉದ್ಯಮಕ್ಕೆ ಸಂಬಂಧಿಸಿದಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ ಮತ್ತು ಮಾಸ್ಟರ್‌ಕ್ಲಾಸ್‌ಗಳು ನಡೆಯಲಿವೆ.


ಪ್ರಕಾಶ್ ರಾಜ್, ಅನುರಾಗ್ ಕಶ್ಯಪ್, ಶ್ರೀಕರ್ ಪ್ರಸಾದ್, ಮಹೇಶ್ ನಾರಾಯಣನ್, ಬಿಶ್ವದೀಪ್ ಚಟರ್ಜಿ ಸೇರಿದಂತೆ ಹಲವರು ಮಾಸ್ಟರ್‌ಕ್ಲಾಸ್ ನಡೆಸಲಿದ್ದಾರೆ. ಗಿರೀಶ್ ಕಾಸರವಳ್ಳಿ, ಜಯಮಾಲ, ಸಾಧು ಕೋಕಿಲ ಅವರೊಂದಿಗೆ ಕನ್ನಡ ಸಿನಿಮಾದ ನಾಲ್ಕು ದಶಕಗಳ ಪಯಣದ ಕುರಿತ ಸಂವಾದವೂ ನಡೆಯಲಿದೆ.


ಸ್ಮರಣೆ ಮತ್ತು ಶ್ರದ್ಧಾಂಜಲಿ
ಭಾರತ ರತ್ನ ಭುಪೆನ್ ಹಜಾರಿಕಾ, ಈಜಿಪ್ಟ್‌ನ ಖ್ಯಾತ ನಿರ್ದೇಶಕ ಯೂಸುಫ್ ಷಹೀನ್ ಅವರ ಶತಮಾನೋತ್ಸವ ಸ್ಮರಣೆ ನಡೆಯಲಿದೆ. ಇತ್ತೀಚೆಗೆ ನಿಧನರಾದ ಪದ್ಮಭೂಷಣ ಡಾ. ಸರೋಜಾ ದೇವಿ ಹಾಗೂ ಎಂ.ಎಸ್. ಉಮೇಶ್ ಅವರ ಸ್ಮರಣಾರ್ಥ ವಿಶೇಷ ಚಿತ್ರ ಪ್ರದರ್ಶನಗಳು ಇರಲಿವೆ. ಶಂಕರ್ ನಾಗ್ ಅವರ ‘ಆಕ್ಸಿಡೆಂಟ್’ ಚಿತ್ರವನ್ನು ಡಿಜಿಟಲೀಕೃತ ಫಾರ್ಮ್ಯಾಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಸ್ಪರ್ಧಾ ವಿಭಾಗಗಳು
ಏಷಿಯನ್ ಸಿನಿಮಾ ಸ್ಪರ್ಧೆ

ಭಾರತೀಯ ಸಿನಿಮಾ (ಚಿತ್ರ ಭಾರತೀ)

ಕನ್ನಡ ಸಿನಿಮಾ ಸ್ಪರ್ಧೆ

ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಬಯಲು ಸಿನಿಮಾ ಪ್ರದರ್ಶನ
ಲುಲುಮಾಲ್ ಹೊರ ಆವರಣದಲ್ಲಿ ಪ್ರತಿದಿನ ಸಂಜೆ ೭ ಗಂಟೆಗೆ ೩೫mm ಪ್ರಿಂಟ್‌ನಲ್ಲಿರುವ ಕ್ಲಾಸಿಕ್ ಕನ್ನಡ ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿದೆ. ಜೊತೆಗೆ ೯೧ ವರ್ಷಗಳ ಕನ್ನಡ ಸಿನಿಮಾದ ಪಯಣವನ್ನು ಬಿಂಬಿಸುವ ವಿಶೇಷ ಛಾಯಾಚಿತ್ರ ಪ್ರದರ್ಶನವೂ ಇರಲಿದೆ.
ಪ್ರತಿನಿಧಿ ನೋಂದಣಿ
ಚಿತ್ರೋತ್ಸವದ ಜಾಲತಾಣ biಜಿಜಿes.oಡಿg ನಲ್ಲಿ ಜನವರಿ ೧೬ರಿಂದ ಪ್ರತಿನಿಧಿ ನೋಂದಣಿ ಆರಂಭವಾಗಿದೆ.
ಸಾರ್ವಜನಿಕರಿಗೆ ರೂ. ೮೦೦ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಫಿಲಂ ಸೊಸೈಟಿ ಸದಸ್ಯರಿಗೆ ರೂ. ೪೦೦ನೋಂದಾಯಿಸಿದವರು ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ, ಸಿನೆಪೊಲಿಸ್ ಲುಲುಮಾಲ್ ಹಾಗೂ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಪ್ರತಿನಿಧಿ ಕಾರ್ಡ್ ಪಡೆಯಬಹುದು.