
ವಾಷಿಂಗ್ಟನ್, ಸೆ,22:- ಇತ್ತೀಚೆಗೆ ದುಷ್ಕರ್ಮಿಯ ಗುಂಡೇಟಿಗೆ ಬಲಿಯಾದ ಸಂಪ್ರದಾಯವಾದಿ ಕಾರ್ಯಕರ್ತ ಚಾರ್ಲಿ ಕಿರ್ಕ್ “ಮಹಾನ್ ಅಮೆರಿಕದ ಹೀರೋ” ಮತ್ತು “ಹುತಾತ್ಮ” ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿದ್ದಾರೆ
ಸೆಪ್ಟೆಂಬರ್ 10 ರಂದು ನಡೆದ ಅರಿಜೋನಾದಲ್ಲಿ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ ಅವರ ಆಡಳಿತದ ಉನ್ನತ ಅಧಿಕಾರಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಕಿಕ್ಕಿರಿದ ಕಾರ್ಯಕ್ರಮದಲ್ಲಿ ಟ್ರಂಪ್ ಮುಖ್ಯ ಭಾಷಣಕಾರರಾಗಿದ್ದರು.
ಚಾರ್ಲಿ ಕಿರ್ಕ್ ಧೈರ್ಯವಂತ, ಧೈರ್ಯದಿಂದ ಬದುಕಿದ್ದರು, ಮತ್ತು ಅಷ್ಟೇ ಧೈರ್ಯವಾಗಿ ಮಾತನಾಡುತ್ತಿದ್ದರು, ಈ ಹಿನ್ನಲೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಿರ್ಕ್ ಅವರ ಪತ್ನಿ ಎರಿಕಾ, ಮಾತನಾಡಿ ಪತಿಯನ್ನು ಕೊಂದ ದುಷ್ಕರ್ಮಿ ಕೊಲೆಗಾರನ್ನು ಕ್ಷಮಿಸುತ್ತೇನೆ ಹೇಳಿದ್ದಾರೆ. ಅದು ಕ್ರಿಸ್ತನು ಮಾಡಿದ ಕೆಲಸ. ದ್ವೇಷಕ್ಕೆ ಉತ್ತರ ದ್ವೇಷವಲ್ಲ ಎಂದಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಹತ್ತಾರು ಸಾವಿರ ಜನರು ಕ್ರೀಡಾಂಗಣದ ಹೊರಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು, ಕಾರ್ಯಕ್ರಮದಲ್ಲಿ ಅವಕಾಶ ಪಡೆಯಲು ಹಿಂದಿನ ರಾತ್ರಿಯಿಂದ ಕ್ರೀಡಾಂಗಣದ ಹೊರಗೆ ಕ್ಯಾಂಪ್ ಮಾಡಿದ್ದರು. ಅನೇಕರು ಮೇಕ್ ಅಮೇರಿಕಾ ಗ್ರೇಟ್ ಎಗೇನ್ ಟೋಪಿಗಳು, ಇತರ ಟ್ರಂಪ್-ಬ್ರಾಂಡ್ ವಸ್ತುಗಳು ಮತ್ತು ಕೆಂಪು, ಬಿಳಿ ಮತ್ತು ನೀಲಿ ಬಟ್ಟೆಗಳನ್ನು ಧರಿಸಿದ್ದರು.
ಕಾರ್ಯಕ್ರಮದಲ್ಲಿ ಸಂಪ್ರದಾಯವಾದಿ ಚಟುವಟಿಕೆಯ ಮೇಲೆ ಕೇಂದ್ರೀಕರಿಸುವ ಕಿರ್ಕ್‍ನ ಸಂಘಟನೆಯಾದ ಟರ್ನಿಂಗ್ ಪಾಯಿಂಟ್ ಸದಸ್ಯರು, ಸಂಪ್ರದಾಯವಾದಿ ಚಳವಳಿಯ ಪ್ರಸಿದ್ಧ ವ್ಯಕ್ತಿಗಳು, ಟ್ರಂಪ್ ಆಡಳಿತ ಅಧಿಕಾರಿಗಳು ಮತ್ತು ಕಿರ್ಕ್‍ನ ಕೆಲಸ ಮತ್ತು ಬಲಪಂಥೀಯ ಕ್ರಿಶ್ಚಿಯನ್ ಸದಸ್ಯರು ಭಾಗಿಯಾಗಿದ್ದರು.