ಚಂಕಿ ಪಾಂಡೆಯನ್ನು ಮದುವೆಯಾಗಲು ಬಯಸಿದ ಏಕ್ತಾ ಕಪೂರ್

ಮುಂಬೈ: ಅ.17:- ಕಿರುತೆರೆಯ ಹೆಸರಾಂತ ನಿರ್ಮಾಪಕಿ ಮತ್ತು ನಿರ್ದೇಶಕಿ ಕಿರುತೆರೆಯ ರಾಣಿ ಎಂದೇ ಹೆಸರಾದ ಏಕ್ತಾ ಕಪೂರ್ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅವರು ಕಠಿಣ ಪರಿಶ್ರಮದ ಮೂಲಕ ಈ ಯಶಸ್ಸನ್ನು ಸಾಧಿಸಿದ್ದಾರೆ. ಏಕ್ತಾ ಯಾವುದೇ ನಟನೊಂದಿಗೆ ಎಂದಿಗೂ ಸಂಬಂಧ ಹೊಂದಿಲ್ಲ ಮತ್ತು ಅವರು ತಮ್ಮ ಪ್ರೇಮ ಜೀವನದ ಬಗ್ಗೆ ಬಹಿರಂಗವಾಗಿ ಚರ್ಚಿಸಿಲ್ಲ. ಆದರೆ ಇತ್ತೀಚೆಗೆ, ಏಕ್ತಾ ತನಗೆ ಬಾಲಿವುಡ್ ನಟನೊಬ್ಬನ ಮೇಲೆ ಪ್ರೀತಿ ಇತ್ತು ಮತ್ತು ಅವರನ್ನು ಮದುವೆಯಾಗಲು ಬಯಸಿದ್ದೆ ಎಂದು ಹೇಳಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.


ಆ ನಟ ಬೇರೆ ಯಾರೂ ಅಲ್ಲ, ಚಂಕಿ ಪಾಂಡೆ. ಏಕ್ತಾ ಚಂಕಿಯ 60 ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಹಳೆಯ ಫೆÇೀಟೋವನ್ನು ಹಂಚಿಕೊಂಡಿದ್ದಾರೆ. ಖ್ಯಾತ ಕಿರುತೆರೆಯ ನಿರ್ಮಾಪಕಿ ಏಕ್ತಾ ಕಪೂರ್ ಇತ್ತೀಚೆಗೆ ಚಂಕಿ ಪಾಂಡೆ ಮೇಲೆ ತಮಗೆ ಒಂದು ಕಾಲದಲ್ಲಿ ಕ್ರಶ್ ಇತ್ತು ಎಂದು ಬಹಿರಂಗಪಡಿಸಿದ್ದಾರೆ. ಚಂಕಿಯ 60 ನೇ ಹುಟ್ಟುಹಬ್ಬದಂದು ಅವರು ಹಳೆಯ ಫೆÇೀಟೋವನ್ನು ಹಂಚಿಕೊಂಡು ಚಂಕಿ ಒಪ್ಪಿಕೊಂಡಿದ್ದರೆ, ಅವರು ಇಂದು ಚಂಕಿ ಪತ್ನಿಯಾಗುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.


47 ವರ್ಷ ವಯಸ್ಸಿನಲ್ಲೂ ಏಕ್ತಾ ಕಪೂರ್ ಒಂಟಿಯಾಗಿದ್ದು, ತಂದೆ ಜಿತೇಂದ್ರರಿಂದ ಪ್ರೇರಿತರಾಗಿ ರವಿ ಎಂಬ ಮಗನನ್ನು ದತ್ತು ಪಡೆದಿದ್ದಾರೆ. ಚಂಕಿ ಪಾಂಡೆ ಭಾವನಾ ಪಾಂಡೆಯನ್ನು ವಿವಾಹವಾಗಿದ್ದು ಮತ್ತು ಅವರಿಗೆ ಅನನ್ಯ ಮತ್ತು ರೈಸಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅನನ್ಯಾ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ, ಆದರೆ ರೈಸಾ ಅವರ ಚೊಚ್ಚಲ ಪ್ರವೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ.