ಗೋವಾ ಅಗ್ನಿ ದುರಂತ: ಪಾಲುದಾರ ಗುಪ್ತಾ ಬಂಧನ

ನವದೆಹಲಿ, ಡಿ. ೧೦- ಕೆಲವು ದಿನಗಳ ಹಿಂದೆ ಭೀಕರ ಬೆಂಕಿ ಸಂಭವಿಸಿದ ಗೋವಾ ನೈಟ್ ಕ್ಲಬ್‌ನ ಮಾಲೀಕ ಸೌರಭ್ ಲೂಥ್ರಾ ಅವರ ವ್ಯವಹಾರ ಪಾಲುದಾರ ಅಜಯ್ ಗುಪ್ತಾ ಅವರು ದೆಹಲಿ ಪೊಲೀಸರು ವಶಕ್ಕೆ ಪಡೆದ ನಂತರ ಬುಧವಾರ ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿ ಪೊಲೀಸರು ವಾಹನದಿಂದ ಹೊರಗೆ ಕರೆದೊಯ್ದ ಅಜಯ್ ಗುಪ್ತಾ ಅವರನ್ನು ಹಲವಾರು ಮಾಧ್ಯಮ ಸಿಬ್ಬಂದಿ ಸುತ್ತುವರೆದರು, ಅವರು ಬೆಂಕಿ, ನೈಟ್ ಕ್ಲಬ್‌ನಲ್ಲಿ ಇರುವ ಸುರಕ್ಷತಾ ವ್ಯವಸ್ಥೆಗಳು ಮತ್ತು ಮಾಲೀಕರ ಸ್ಥಳದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.


“ನಾನು ಕೇವಲ ಪಾಲುದಾರ. ನನಗೆ ಏನೂ ಗೊತ್ತಿಲ್ಲ ಎಂದು ಗುಪ್ತಾ ಹೇಳಿದರು.ಗೋವಾದ ಅರ್ಪೋರಾದ ಜನಪ್ರಿಯ ನೈಟ್ ಕ್ಲಬ್ ’ಬಿರ್ಚ್ ಬೈ ರೋಮಿಯೋ ಲೇನ್ ನಲ್ಲಿ ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ೨೫ ಜನರು ಸಾವನ್ನಪ್ಪಿದ್ದಾರೆ. ಬೆಂಕಿ ಆದ ಸ್ವಲ್ಪ ಸಮಯದ ನಂತರ, ನೈಟ್ ಕ್ಲಬ್‌ನ ಇಬ್ಬರು ಪ್ರಾಥಮಿಕ ಮಾಲೀಕರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರು ಇಂಡಿಗೋ ವಿಮಾನದಲ್ಲಿ ಥೈಲ್ಯಾಂಡ್‌ನ ಫುಕೆಟ್‌ಗೆ ಹಾರಿದರು.


ಅವರ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಅಂತಿಮವಾಗಿ ದೆಹಲಿಯಲ್ಲಿ ಬಂಧನಕ್ಕೊಳಗಾಗುವ ಮೊದಲು ಅಜಯ್ ಗುಪ್ತಾ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿತ್ತು.ಈ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಗುಪ್ತಾ ಅವರನ್ನು ಈಗ ಗೋವಾಕ್ಕೆ ಕರೆದೊಯ್ಯಲಾಗುವುದು.