
ಚೆನ್ನೈ, ಆ.೨೩-ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಮುಂಬರುವ ದುಲೀಪ್ ಟ್ರೋಫಿ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಅನಾರೋಗ್ಯದ ಕಾರಣ ಗಿಲ್ ಆಗಸ್ಟ್ ೨೮ ರಿಂದ ಶುರುವಾಗಲಿರುವ ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿಯಾಗಿದೆ. ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಶುಭ್?ಮನ್ ಗಿಲ್ ಉತ್ತರ ವಲಯ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.
ಆಗಸ್ಟ್ ೨೮ ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಿತ್ತು. ಆದರೀಗ ಅನಾರೋಗ್ಯದ ಕಾರಣ ದೇಶೀಯ ಟೆಸ್ಟ್ ಟೂರ್ನಿಯಿಂದ ಹೊರಗುಳಿಯಲು ಗಿಲ್ ನಿರ್ಧರಿಸಿದ್ದಾರೆ . ಒಂದು ವೇಳೆ ಅವರು ಟೂರ್ನಿ ಆರಂಭಕ್ಕೂ ಮುನ್ನ ಸಂಪೂರ್ಣ ಗುಣಮುಖರಾದರೂ, ಇಡೀ ಟೂರ್ನಿ ಆಡುವುದಿಲ್ಲ.
ಶುಭ್?ಮನ್ ಗಿಲ್ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್ ಟಿ೨೦ ಟೂರ್ನಿಯುವ ಸೆಪ್ಟೆಂಬರ್ ೯ ರಿಂದ ಶುರುವಾಗಲಿದೆ. ಆದರೆ ದುಲೀಪ್ ಟ್ರೋಫಿ ನಡೆಯುವುದು ಆಗಸ್ಟ್ ೨೮ ರಿಂದ ಸೆಪ್ಟೆಂಬರ್ ೧೫ ರ ನಡುವೆ. ಹೀಗಾಗಿ ಶುಭ್?ಮನ್ ಗಿಲ್ ಚೇತರಿಸಿಕೊಂಡು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡರೂ ಸೆಪ್ಟೆಂಬರ್ ಮೊದಲ ವಾರದಲ್ಲೇ ಉತ್ತರ ವಲಯ ತಂಡವನ್ನು ತೊರೆಯಲಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬೇಕಾಗಿದೆ. ಭಾರತ ತಂಡವು ಏಷ್ಯಾಕಪ್? ಟೂರ್ನಿಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಶೇಷ ಶಿಬಿರ ಏರ್ಪಡಿಸುವ ಸಾಧ್ಯತೆಯಿದ್ದು, ಈ ಶಿಬಿರದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಯುಎಇಗೆ ತೆರಳಲಿದ್ದಾರೆ. ಇನ್ನು ಶುಭ್?ಮನ್ ಗಿಲ್ ದುಲೀಪ್ ಟ್ರೋಫಿಗೆ ಅಲಭ್ಯರಾದರೆ ಉತ್ತರ ವಲಯ ತಂಡವನ್ನು ಅಂಕಿ ಕುಮಾರ್ ಮುನ್ನಡೆಸಲಿದ್ದಾರೆ.