ಗಾನಯೋಗಿ ಕಲಾ ಕೇಂದ್ರದಲ್ಲಿ  ವಿಶ್ವ  ಸಂಗೀತ ದಿನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.22:
ಇಲ್ಲಿನ ಹವಂಭಾವಿಯ ವಿರಾಟ್ ನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯಿಂದ ನಿನ್ನೆ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು.
ಹಿಂದುಸ್ತಾನಿ ಸಂಗೀತದಲ್ಲಿ ಸಂತೋಷ, ಸರಸ್ವತಿ, ಗೌರಿ, ಮೇಘನಾ, ಮನೀಶ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಹಕಲಾವಿದರಾಗಿ ಯೋಗೀಶ ಸಂಗನಕಲ್ ಪುಟ್ಟರಾಜ ಪಂಚಾಕ್ಷರಿ ದೊಡ್ಡ ಬಸವಗವಾಯಿ ಇದ್ದರು ಮತ್ತು ಸಂಗೀತ ಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು