
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.24: ಈ ತಿಂಗಳ 27 ರಿಂದ ಆರಂಭಗೊಳ್ಳುವ ಗಣೋತ್ಸವಕ್ಕೆ ನಗರದೆಲ್ಲೆಡೆ ಭರ್ಜರಿ ಸಿದ್ದತೆ ನಡೆದಿದ್ದು. ಗಣೇಶ ಪ್ರತಿಷ್ಟಾಪನೆಯ ಸ್ಥಳ, ರಸ್ತೆಗಳಲ್ಲಿ ರಂಗು ರಂಗಿನ ವಿದ್ಯುತ್ ದೀಪಗಳ ಅಲಂಕಾರ ಗೈಗೊಳ್ಳಲಾಗುತ್ತಿದೆ.
ನಗರದ ಎಂ.ಜಿ.ಸರ್ಕಲ್ ಬಳಿ ಕಳೆದ 26 ವರ್ಷದಿಂದ ಸರ್ವಸಿದ್ದಿ ವಿನಾಯಕ ಮಿತ್ರ ಮಂಡಳಿ ಗಣೇಶೋತ್ಸವ ನಡೆಸುತ್ತಾ ಬಂದಿದೆ.
ಈ ವರ್ಷವೂ ಕೂಡಾ ಗಣೇಶೋತ್ಸವ ಆಚರಣೆ ಮಾಡಲು ಸಕಲ ಸಿದ್ದತೆ ನಡೆಸಿದ್ದು. ಗಣೇಶನ ಪ್ರತಿಷ್ಟಾಪನೆಯ ಮುಂಭಾಗದ ರಸ್ತೆಯಲ್ಲಿ ಅರ್ಧಕಿಲೋ ಮೀಟರ್ ವರೆಗೆ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ.
ಇದೇ ರೀತಿ ಇನ್ನೂ ಅನೇಕಕಡೆಗಳಲ್ಲಿ ಗಣೇಶೋತ್ಸವಕ್ಕೆ ಕೈಗೊಂಡಿರುವ ವಿದ್ಯುತ್ ದೀಪಗಳ ಅಲಂಕಾರ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಿದೆ.