
ಶಿವಮೊಗ್ಗ, ಜ.೧೦- ಕೆಲ ತಿಂಗಳುಗಳ ಹಿಂದೆ ರಸ್ತೆ ಬದಿ ಪತ್ತೆಯಾಗಿದ್ದ ಅನಾಮಧೇಯ ನವಜಾತ ಗಂಡು ಮಗುವಿನ ಪೋಷಕರ ಪತ್ತೆಗೆ ನೆರವಾಗುವಂತೆ, ಮಕ್ಕಳ ಕಲ್ಯಾಣ ಸಮಿತಿಯು ಸಾರ್ವಜನಿಕರಿಗೆ ಮನವಿ ಮಾಡಿದೆ.ಈ ಕುರಿತಂತೆ ಜನವರಿ ೧೦ ರಂದು ಮಗುವಿನ ಭಾವಚಿತ್ರದೊಂದಿಗೆ ಪ್ರಕಟಣೆ ಬಿಡುಗಡೆ ಮಾಡಿದೆ. ‘ಭದ್ರಾವತಿ ತಾಲುಕು ಮಲ್ಲಾಪುರ ಗ್ರಾಮದ ಗೇಟ್ ಹತ್ತಿರ ರಸ್ತೆ ಬದಿಯ ಬಳಿ ಮಗು ಪತ್ತೆಯಾಗಿತ್ತು.
ಸಾರ್ವಜನಿಕರ ಮಾಹಿತಿ ಮೇರೆಗೆ ಹೊಳೆಹೊನ್ನೂರು ಠಾಣೆ ಪೊಲೀಸರು ಮಗುವನ್ನು ರಕ್ಷಿಸಿದ್ದರು. ೧೬-೧೨-೨೦೨೫ ರಂದು ಪೋಷಕರ ಪತ್ತೆಗಾಗಿ ದೂರು ದಾಖಲಿಸಿ, ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಮಗುವನ್ನು ಒಪ್ಪಿಸಲಾಗಿತ್ತು. ಮಗುವಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಪೋಷಕರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಮಾಹಿತಿ ದೊರಕಿದಲ್ಲಿ ಶಿವಮೊಗ್ಗದ ಆಲ್ಕೋಳದಲ್ಲಿರುವ ಸರ್ಕಾರಿ ಬಾಲಕರ ಬಾಲ ಮಂದಿರ ದೂರವಾಣಿ ಸಂಖ್ಯೆ : ೦೮೧೮೨೨೯೫೫೧೧ ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
























