ಕರ್ನಾಟಕ ಮಹಿಳಾ ಲೀಗ್‍ಗೆ ಕಶ್ಯಪ್ ಪ್ರಾಯೋಜಕತ್ವ

ಬೆಂಗಳೂರು, ಆ.29:- ಕೌಶಲ್ಯ ಮತ್ತು ಚಾಂಪಿಯನ್‍ಗಳ ಚೈತನ್ಯದ ಪ್ರದರ್ಶನದೊಂದಿಗೆ ಕರ್ನಾಟಕ ಮಹಿಳಾ ಲೀಗ್ 2025-26 ಮುಕ್ತಾಯವಾಯಿತು. ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್ ಶೀರ್ಷಿಕೆ ಪ್ರಾಯೋಜಕ ರಾಗಿದ್ದರು. ಪ್ರಸಕ್ತ ವರ್ಷವು ಕರ್ನಾಟಕದಲ್ಲಿ ಮಹಿಳಾ ಫುಟ್‍ಬಾಲ್‍ನ ಆರಂಭಕ್ಕೆ ನಾಂದಿ ಹಾಡಿದ್ದಲ್ಲದೇ ಹೊಸ ಪೀಳಿಗೆಯ ಕ್ರೀಡಾಪಟುಗಳು ತಮ್ಮ ಕ್ರೀಡಾ ಕನಸುಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿತು.


ಎಐಎಫ್‍ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ; ಶಾಸಕ ಶಾಂತಿನಗರ ಕ್ಷೇತ್ರದ ಶಾಸಕ, ಎಐಎಫ್‍ಎಫ್ ಉಪಾಧ್ಯಕ್ಷ ಮತ್ತು ಕೆಎಸ್‍ಎಫ್‍ಎ ಅಧ್ಯಕ್ಷ ಎನ್ ಎ ಹ್ಯಾರಿಸ್; ಎಐಎಫ್‍ಎಫ್ ಉಪ ಪ್ರಧಾನ ಕಾರ್ಯದರ್ಶಿ ಎಂ ಸತ್ಯನಾರಾಯಣ್ ಮತ್ತು ಕೆಎಸ್‍ಎಫ್‍ಎ ಉಪಾಧ್ಯಕ್ಷ ಶಕೀಲ್ ರಹಿಮಾನ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆಡಬ್ಲ್ಯೂಎಲ್ 2025?26 ರ ಶೀರ್ಷಿಕೆ ಪ್ರಾಯೋಜಕಿ ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್‍ನ ಯೋಜನೆಗಳು ಮತ್ತು ಕಾರ್ಯತಂತ್ರದ ನಿರ್ದೇಶಕಿ ಶ್ರೀಮತಿ ಶ್ರುತಿ ಕಶ್ಯಪ್ ಚೌಧರಿ, ಕೆಎಸ್‍ಎಫ್‍ಎ, ಬಿಡಿಎಫ್‍ಎ ಮತ್ತು ರೆಫರಿಗಳ ಸಮಿತಿಯ ಪ್ರತಿನಿಧಿಗಳು ಪಾಲ್ಗೊಂಡರು.
ಶ್ರುತಿ ಕೆ. ಚೌಧರಿ ಮಾತನಾಡಿ, “ಪ್ರಾಯೋಜಕರಾಗಿ, ಬಿ ಎಲ್ ಕಶ್ಯಪ್ ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಮಹಿಳೆಯರು ಶ್ರೇಷ್ಠತೆ ಸಾಧಿಸಲು ಸಮಾನ ಅವಕಾಶ ಗಳ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.