
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರದ ಡಾ.ಸಿ. ಮುನಿಸ್ವಾಮಿ ಕಪ್ಪಗಲ್ಲು ಇವರಿಗೆ ಬೆಂಗಳೂರಿನ ಚಿತ್ರ ಸಂತೆ ಇವರಿಂದ ನಟ ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮಾಜ ಸೇವೆ ಹಾಗೂ ಕಳೆದ 20 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬಂದಿರುವ ಮುನಿಸ್ವಾಮಿಯವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಚಿತ್ರಸಂತೆ ಆಯೋಜನೆಯ ಅಧ್ಯಕ್ಷರ ಗಿರೀಶ್ ಗೌಡ, ಚಲನಚಿತ್ರ ನಾಯಕಿ ರಚನಾ ರಾಯ್ ಹಾಗೂ ಹಿಂದಿ ಚಲನಚಿತ್ರ ನಾಯಕ ಜಯ ಪ್ರಭು ಲಿಂಗಾಯತ್ ಮತ್ತು ಸಿನಿ ಕ್ಷೇತ್ರದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.



























