
ಸಂಜೆವಾಣಿ ವಾರ್ತೆ
ಹನೂರು.ಮಾ.16:- ಒಳ ಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ನೀಡಿರುವ ವರದಿಯ ಹಂಚಿಕೆ ಮತ್ತು ರೋಸ್ಟರ್ ಬಿಂದುಗಳಲ್ಲಿ ಬಲಗೈ ಹೊಲಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಖಂಡಿಸಿ ಇಂದು ಸೋಮವಾರ ಹನೂರು ಪಟ್ಟಣದಲ್ಲಿ ಬಾರಿ ಬೃಹತ್ ಪ್ರತಿಭಟನೆ ನಡೆಯಿತು.
ಹನೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲಾ ಬಲಗೈ ಸಮುದಾಯದ ಒಕ್ಕೂಟದಿಂದ ಹನೂರು ಕೊಳ್ಳೇಗಾಲ ತಾಲೂಕಿನಾ ಹಲವು ಗ್ರಾಮಗಳಿಂದ ಆಗಮಿಸಿದ ಬಲವೇ ಸಮುದಾಯದ ಸಂಘಟನೆಗಳು ಸಾರ್ವಜನಿಕ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಮಾಯಿಸಿದರು.
ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗಿ ಪಟ್ಟಣದ ಪೆಟ್ರೋಲ್ ಬಂಕ್ ಖಾಸಗಿ ಬಸ್ ನಿಲ್ದಾಣ ದಿವಂಗತ ಎಚ್ ನಾಗಪ್ಪ ಸರ್ಕಲ್ ಮೂಲಕ ತೆರಳಿ ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದ್ದು ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಆರೋಪಿಸಿದರು. ಈಗಾಗಲೇ ಕೊಳ್ಳೇಗಾಲ, ಚಾಮರಾಜನಗರ ಮತ್ತು ಯಳಂದೂರು ತಾಲೂಕುಗಳಲ್ಲಿ ಈ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಗಳನ್ನು ನಡೆಸಲಾಗಿದೆ.
ದಲಿತ ಬಲಗೈ ಸಮುದಾಯದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಆಡಳಿತ ಪಕ್ಷದಲ್ಲಿದ್ದರೂ ಈ ವಿಷಯದಲ್ಲಿ ಧ್ವನಿ ಎತ್ತದಿರುವುದು ಸಮುದಾಯದ ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಹನೂರು ತಾಲೂಕು ಕೊಳ್ಳೇಗಾಲ ತಾಲೂಕು ವಿವಿಧ ಗ್ರಾಮಗಳ ಬಲಗೈ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು.
ಪ್ರತಿಭಟನೆಯಲ್ಲಿ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮತ್ತಿಪುರ, ತೆಳ್ಳನೂರು, ಕೊಳ್ಳೇಗಾಲ ತಾಲೂಕಿನ ಮಣಗಳ್ಳಿ, ಬಂಡಳ್ಳಿ, ಅಜ್ಜಿಪುರ ಲೊಕ್ಕನಹಳ್ಳಿ, ಚಿಕ್ಕಮಾಲಾಪುರ, ಪಿ. ಜಿ ಪಾಳ್ಯ, ರಾಮಾಪುರ ವ್ಯಾಪ್ತಿಯ ವಿವಿಧ ಗ್ರಾಮಗಳು ತಾಲೂಕಿನ ವಿವಿಧ ಗ್ರಾಮಗಳು ಮುಖಂಡರುಗಳು ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






























