ಏಷ್ಯಾ ಕಪ್ ಗೆದ್ದುಇತಿಹಾಸ ನಿರ್ಮಿಸಲು ಸೂರ್ಯಕುಮಾರ್ ಸಜ್ಜು


ಮುಂಬೈ, ಆ.೨೩- ಈ ಬಾರಿ ಏಷ್ಯಾ ಕಪ್ ಕ್ರಿಕೆಟ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಲು ಭಾರತೀಯ ತಂಡದ ನಾಯಕ ಸೂರ್ಯಕಯಮಾರ್ ಸಜ್ಜಾಗಿದ್ದಾರೆ.
೨೦೨೬ರಲ್ಲಿ ಟಿ೨೦ ವಿಶ್ವಕಪ್ ನಡೆಯಲಿದೆ. ಹೀಗಾಗಿ ಈ ಬಾರಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಟಿ೨೦ ಸ್ವರೂಪದಲ್ಲಿ ಆಡಿಸಲಾಗುತ್ತಿದೆ. ಈ ವರೆಗೆ ಭಾರತದ ಪರ ಒಬ್ಬ ನಾಯಕ ಮಾತ್ರ ಏಷ್ಯಾ ಕಪ್ ಟಿ೨೦ ಗೆದ್ದ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಸಹ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆಯಲು ತಂತ್ರ ರೂಪಿಸಿದ್ದಾರೆ. ೨೦೧೬ರಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಶಸ್ತಿ ಎತ್ತಿದ್ದರು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಮಣಿಸಿತ್ತು.
ಆಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಮೊದಲು ಬ್ಯಾಟ್ ಮಾಡಿ ೧೨೦ ರನ್‌ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ ೮ ವಿಕೆಟ್‌ಗಳಿಂದ ಪಂದ್ಯ ಗೆದ್ದಿತು. ಆ ಪಂದ್ಯದಲ್ಲಿ ಶಿಖರ್ ಧವನ್ ೬೦ ರನ್ ಬಾರಿಸಿದ್ದರೆ, ವಿರಾಟ್ ಕೊಹ್ಲಿ ೪೧ ರನ್ ಸಿಡಿಸಿದ್ದರು.
ಆ ಬಳಿಕ ೨೦೨೨ರಲ್ಲಿ ಏಷ್ಯಾ ಕಪ್‌ನ್ನು ಟಿ೨೦ ಸ್ವರೂಪದಲ್ಲಿ ಆಡಿಸಲಾಗಿತ್ತು. ಆಗ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ವಿಫಲವಾಗಿತ್ತು. ಈ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಪಾಕ್ ಮಣಿಸಿ ಏಷ್ಯಾ ಕಪ್‌ಗೆ ಮುತ್ತಿಟ್ಟಿತ್ತು.
.೨೯ರಂದು ನಡೆಯಲಿರುವ ಏಷ್ಯಾ ಕಪ್ ಟಿ೨೦ ಟೂರ್ನಿಯಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಸೂರ್ಯ ಇತಿಹಾಸ ನಿರ್ಮಿಸುವ ಕನಸಿನಲ್ಲಿದೆ. ಏಕದಿನ ಏಷ್ಯಾ ಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ೨೦೧೮, ೨೦೨೩ರಲ್ಲಿ ಗೆದ್ದು ಬೀಗಿದ್ದರು.
.೨೯ರಂದು ನಡೆಯಲಿರುವ ಏಷ್ಯಾ ಕಪ್ ಟಿ೨೦ ಟೂರ್ನಿಯಲ್ಲಿ ಭಾರತ ತಂಡ ಜಯ ಸಾಧಿಸಿದರೆ, ಸೂರ್ಯ ಇತಿಹಾಸ ನಿರ್ಮಿಸುವ ಕನಸಿನಲ್ಲಿದೆ. ಏಕದಿನ ಏಷ್ಯಾ ಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ೨೦೧೮, ೨೦೨೩ರಲ್ಲಿ ಗೆದ್ದಿದ್ದರು.