
ಮುಂಬೈ, ಡಿ.10:- ದೇಶದ ವಿವಧ ಭಾಗಗಳಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಡಿಸೆಂಬರ್ 1 ರಿಂದ 8 ರವರೆಗೆ 905 ವಿಮಾನಗಳ ರದ್ದು ಮಾಡಿದ ಹಿನ್ನೆಲೆಯಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಕಾಲ 1,475 ವಿಮಾನಗಳ ವಿಳಂಬವಾಗಿದೆ.ಜೊತೆಗೆ 2.6 ಲಕ್ಷ ವಿಮಾನ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
“ಇಂಡಿಗೋ ಈಗ ಪ್ರಯಾಣಿಕರಿಗೆ ನಿಗದಿತ ನಿರ್ಗಮನ ಸಮಯಕ್ಕಿಂತ ಕನಿಷ್ಠ ಆರು ಗಂಟೆಗಳ ಮೊದಲು ಸಂಭಾವ್ಯ ರದ್ದತಿ ಮಾಹಿತಿ ನೀಡುವ ಇಕ್ಕಟ್ಟಿಗೆ ಸಿಲುಕಿದೆ, ಒಂದು ವೇಳೆ ವಿಮಾಯನಯಾನ ಸಂಸ್ಥೆ ನಾನಾ ಕಾರಣದಿಂದ ವಿಮಾನ ಸಂಚಾರದಲ್ಲಿ ಏರು ಪೇರು ಅಥವಾ ರದ್ದಾದರೆ ವಿಮಾನ ಹೊರಡುವ 6 ಗಂಟೆ ಮುನ್ನ ಮಾಹಿತಿ ನೀಡುವುದು ಕಡ್ಡಾಯವಾಗಿದೆ
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಧು ಸುಡಾನ್ ಶಂಕರ್ ಡಿಸೆಂಬರ್ 1 ರಿಂದ 8 ರವರೆಗೆ ಇಂಡಿಗೋ ವಿಮಾನದಿಂದ ನೇರವಾಗಿ 2.6 ಲಕ್ಷ ಮುಂಬೈ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಇಳಿಸಿದೆ.
ದೇಶಾದ್ಯಂತ À ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಇಂಡಿಗೋ ಪ್ರಯಾಣಿಕರು ಸಿಲುಕಿಕೊಂಡ ಒಂದು ವಾರದ ನಂತರ, ನಾಗರಿಕ ವಿಮಾನಯಾನ ಸಚಿವಾಲಯ ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಪುಣೆ, ಗುವಾಹಟಿ, ಗೋವಾ ಮತ್ತು ತಿರುವನಂತಪುರಂ ಸೇರಿದಂತೆ 10 ಪ್ರಮುಖ ವಿಮಾನ ನಿಲ್ದಾಣಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದೆ.
ಇಂದು ಮುಂಜಾನೆಯೇ ಅಧಿಕಾರಿಗಳು ಅನಿರೀಕ್ಷಿತ ಲೆಕ್ಕಪರಿಶೋಧನೆ ನಡೆಸಲು ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದು ವಿಮಾನ ರದ್ದತಿ ಸೇರಿದಂತೆ ಮತ್ತಿತರರ ವಿಷಯಗಳ ಬಗ್ಗೆ ವಿಮಾನ ಯಾನ ಸಿಬ್ಬಂಧಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದಿದ್ದಾರೆ.
ಇಂಡಿಗೋ ಬಿಕ್ಕಟ್ಟಿಗೆ ಸಿಲುಕುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ನಿಯಮಗಳು ನಾಗರಿಕರ ಜೀವನವನ್ನು ಸರಾಗಗೊಳಿಸಬೇಕು, ಹೊರೆಯಾಗಬಾರದು ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಎಂಟು ದಿನಗಳ ಅವಧಿಯಲ್ಲಿ ಇಂಡಿಗೋ ಮುಂಬೈನಿಂದ 3,171 ನಿಗದಿತ ವಿಮಾನಗಳ ಸಂಚಾರದಲ್ಲಿ ಪರಿಣಾಮ ಬೀರಿದೆ/ಈ ಅವಧಿಯಲ್ಲಿ ಕೇವಲ 2,266 ವಿಮಾನ ನಿರ್ವಹಣೆ ಮಾಡುವಲ್ಲಿ ಯಶಸ್ಸು ಕಂಡಿದೆ.

























