
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜೂ.23; ಕರ್ನಾಟಕ ಅಹಿಂದ ಜನ ಸಂಘದ ರಾಜ್ಯಾಧ್ಯಕ್ಷ ಅಯ್ಯಪ್ಪಗೌಡ ಅವರ ಸೂಚನೆ ಮೇರೆಗೆ. ಜಿಲ್ಲಾಧ್ಯಕ್ಷ ಎಂ.ಜಿ ಕನಕ ಅವರು ಅಹಿಂದ ಜನ ಸಂಘಕ್ಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಯಾಳ್ಪಿ ಶೇಕ್ಷಾವಲಿ ಹಾಗೂ ಜಿಲ್ಲಾ ಯುವ ಘಟಕದ ಸಂಚಾಲಕರನ್ನಾಗಿ ನಾಗರಾಜ ಅವರನ್ನು ನೇಮಕ ಮಾಡಿದ್ದಾರೆ.
ಅಹಿಂದ ಸಂಘದ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ, ಸಂಘದ ಬೆಳವಣಿಗೆಗಾಗಿ ದುಡಿಯುತ್ತೇವೆ ಎಂದು ಯಾಳ್ಪಿ ಶೇಕ್ಷಾವಲಿ ಮತ್ತು ನಾಗರಾಜ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮೊಹಮ್ಮದ್ ರಿಯಾಜ್, ಜಿಲ್ಲಾ ಗೌರವಾಧ್ಯಕ್ಷ ಬಿ.ಮಾರುತಿ, ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ಉಪಾಧ್ಯಕ್ಷ ಚೇಳ್ಳಗುರ್ಕೀ ನಾಗರಾಜ್, ಯುವ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಸಂಘಟನೆ ಕಾರ್ಯದರ್ಶಿ ಸಿ.ಗಂಗಾಧರ್, ನಗರ ಉಪಾಧ್ಯಕ್ಷರಾದ ಮೆಹಬೂಬ್, ಬಾಷಾ, ಕಾರ್ಮಿಕ ಯುವ ಘಟಕದ ಗ್ರಾಮಾಂತರ ಅಧ್ಯಕ್ಷ ರಾಮಕೃಷ್ಣ, ನಗರ ಉಪಾಧ್ಯಕ್ಷ ಖಾಲಿದ್ ಬಾಷ ಹಾಗೂ ಯುವ ಘಟಕದ ಗ್ರಾಮಾಂತರ ಅಧ್ಯಕ್ಷ ವೈಫೈ ಶಿವು, ಬಾಷ, ಸುನೀಲ್, ಭೀಮ ಮತ್ತಿತರರು ಇದ್ದರು.