ಅವರೇ ಬೇಳೆ ಉತ್ಸವಕ್ಕೆ ಚಾಲನೆ

ಕೆ.ಆರ್.ಪುರ, ಜ.31:- ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆರ್.ಕೇಶವಣ್ಣ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಅವರೇಬೇಳೆ ಉತ್ಸವಕ್ಕೆ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಅವರು ಚಾಲನೆ ನೀಡಿದರು.


ಚಾಲನೆ ನೀಡಿ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಅವರು ಅವೇರೆಕಾಯಿಯ ಪ್ರಾಚೀನ ಸೋಗಡಿನ ಸಂಕೇತವಾಗಿದೆ,ಯುವಜನತೆಗೆ ಇದರ ಸ್ವಾಧದ ಬಗ್ಗೆ ಪರಿಚಯ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ನುಡಿದರು. ಆಧುನಿಕ ಯುಗದಲ್ಲಿ ಇಂತಹ ಉತ್ಸವಗಳು ಅವಶ್ಯಕ ವಾಗಿದೆ ಅವರೇಕಾಯಿಯ ಮಹತ್ವ ಸೇರಿದಂತೆ ತಿಂಡಿ ತಿನಿಸುಗಳ ಬಗ್ಗೆ ಮೇಳಮಾಡುತ್ತಿರುವ ಕೇಶವಣ್ಣ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕ ಕೇಶವಣ್ಣ ಅವರು ಯುವಪೀಳಿಗೆಗಾಗಿ ಮೇಳ ಆಯೋಜನೆ ಮಾಡಲಾಗಿದೆ, ಮಗ ಧನುಶ್ ಕೇಶವ ಉಸ್ತುವಾರಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಪ್ಪ, ಪಟಾಕಿ ರವಿ, ಆನಂತ್, ರಘವ್, ಧನಶ್ ಕೇಶವ, ಅಶ್ವತಣ್ಣ, ಶ್ರೀನಿವಾಸ,ಅಂತೋನಿ, ರಮೇಶ್ ಉಷಾ, ರಾಜೇಶ್ವರಿ, ಜ್ಯೋತಿ, ಸುಧಾ ಇದ್ದರು.