
ಉಡುಪಿ-ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯಾ ಮೊಹಲ್ಲಾದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ, ಮೊಹಮ್ಮದ್ ಸಾಜಿದ್ ಎಂಬ ವ್ಯಕ್ತಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಮಾಂಸ ಸಾಗಾಟ ಮತ್ತು ಮಾರಾಟಕ್ಕೆ ಸಿದ್ಧತೆ ನಡೆಸುತ್ತಿರುವುದು ಪತ್ತೆಯಾಗಿದೆ. ಮಾಂಸ ವ್ಯಾಪಾರದ ಉದ್ದೇಶದಿಂದ ಆತ ಅಕ್ರಮವಾಗಿ ನಾಲ್ಕು ಜಾನುವಾರುಗಳನ್ನು ತಂದು ಬಂಧಿಸಿರುವುದು ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ.
ಈ ಕುರಿತು, ಬೈಂದೂರು ಪೊಲೀಸರು ಅಪರಾಧ ಸಂಖ್ಯೆ ೧೧೪/೨೦೨೫ ಅಡಿಯಲ್ಲಿ ಕರ್ನಾಟಕ ಜಾನುವಾರು ವಧೆ ತಡೆಗಟ್ಟುವಿಕೆ ಮತ್ತು ಗೋಸಂರಕ್ಷಣಾ ಕಾಯಿದೆ, ೨೦೨೦ ರ ಸೆಕ್ಷನ್ ೭ ಮತ್ತು ೧೨ ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನು ಕ್ರಮಗಳಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.