
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ. ಅ.05: ಬಡಜನತೆಗೆ ಹಸಿದಾಗ ಕಡಿಮೆ ಧರದಲ್ಲಿ ಅನ್ನ ನೀಡುತ್ತವೆ ಇಂದಿರಾ ಕ್ಯಾಂಟೀನ್ ಗಳು. ಆದರೆ ನಗರದ ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಹಗಲು ವೇಳೆ ಅನ್ನ ನೀಡುವ ಕೇಂದ್ರವಾದರೆ, ರಾತ್ರಿಯಾಗುತ್ತಿದ್ದಂತೆ ಕುಡುಕರ ತಾಣವಾಗುತ್ತೆ.
ನಗರದಲ್ಲಿ ಆರಂಭವಾಗಿರುವ ಬಹುತೇಖ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಿಗೆ ಕಾಂಪೌಂಡ್ ರೀತಿ ಭದ್ರತೆ ಇದೆ. ಆದರೆ ಈ ಕೇಂದ್ರಕ್ಕೆ ಮಾತ್ರ ಆ ಭದ್ರತೆ ಇಲ್ಲದಂತಾಗಿದೆ.
ಹಾಗಾಗಿ ಎದುರಿನಲ್ಲಿರುವ ಲಿಕ್ಕರ್ ಶಾಪ್ ನಲ್ಲಿ ಮದ್ಯದ ಬಾಟಲ್, ಪ್ಲಾಸ್ಟಿಕ್ ಕಪ್ ಖರೀದಿ ಮಾಡಿಕೊಂಡು ಬಂದು ಈ ಕ್ಯಾಂಟೀನ್ ಆವರಣದಲ್ಲಿ ಯಾರ ಮುಲಾಜಿಲ್ಲದೆ ರಾಜಾ ರೋಷವಾಗಿ ಕುಳಿತು ಮದ್ಯ ಸೇವನೆ ನಡೆಯುತ್ತೆ. ಅದರಿಂದ ರಾತ್ರಿ ಯಾದರೆ ಇದು ಕುಡುಕರ ತಾಣ ಆಗುತ್ತೆ.
ರಾತ್ರಿ ಕುಡಿದು ಬೀಸಾಡಿದ ಬಾಟಲ್ ಗಳನ್ನು
ಬೆಳಿಗ್ಗೆ ಚಿಂದಿ ಆಯುವವರು ಬಂದು ಆಯ್ದುಕೊಳ್ಳುತ್ತಾರೆ. ಆದರೆ ಪ್ಲಾಸ್ಟಿಕ್ ಗ್ಲಾಸ್ ಗಳು ಮಾತ್ರ ಆವರಣದ ತುಂಬ ಹರಿದಾಡುತ್ತವೆ. ಬೆಳಿಗ್ಗೆ ಬರುವ ಕ್ಯಾಂಟೀನ್ ಸಿಬ್ಬಂದಿಯೇ ಈ ಅಸಹ್ಯ ನೋಡದೆ ಎತ್ತಿ ಹಾಕುವುದು ಸಹ ಇದೆ.
ರಾತ್ರಿ ಆಗಾಗ್ಗೆ ಪೊಲೀಸರು ಈ ಕಡೆ ಇಣುಕಿ ನೋಡಿದರೆ ಇದಕ್ಕೆ ಒಂದಿಷ್ಟು ಕಡಿವಾಣ ಬೀಳಬಹುದೇನೋ