Home ಜಿಲ್ಲೆ ಮಂಗಳೂರು ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತ -ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ – ಫಣೀಂದ್ರ ಕೆ

ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತ -ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ – ಫಣೀಂದ್ರ ಕೆ

ಮಂಗಳೂರು- ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಕಾಪಾಡಬೇಕಾದ ಕೇಂದ್ರ ಸರಕಾರವು ನಿತ್ಯ ನಿರಂತರವಾಗಿ ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ.ಆ ಮೂಲಕ ಕಾರ್ಪೊರೇಟ್ ಸರಕಾರವಾಗಿದೆ. ಹಸಿವು ಮುಕ್ತ,ಬಡತನ ಮುಕ್ತ, ನಿರುದ್ಯೋಗ ಮುಕ್ತ ಭಾರತವಾಗಿ ನಿರ್ಮಾಣ ಮಾಡುವ ಬದಲು ಯೂನಿಯನ್ ಮುಕ್ತ ಭಾರತವನ್ನಾಗಿ ನಿರ್ಮಿಸಲು ಹೊರಟಿದೆ.ಈ ಮೂಲಕ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸಿ ಅತ್ಯಂತ ಹೀನಾಯವಾಗಿ ಶೋಷಣೆ ಮಾಡಲು ಹೊರಟಿದೆ ಎಂದು ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ ಯವರು ಆಕ್ರೋಶ ವ್ಯಕ್ತಪಡಿಸಿದರು.
ಅವರು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಅಖಿU)ದ ಆಶ್ರಯದಲ್ಲಿ ಫೆಬ್ರವರಿ ೧೨ರ ಅಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥವಾಗಿ ಆಯೋಜಿಸಲ್ಪಟ್ಟ ದ.ಕ.ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ಉದ್ಘಾಟಿಸಿಸುತ್ತಾ ಈ ಮಾತುಗಳನ್ನು ಹೇಳಿದರು
ಮುಖ್ಯ ಅತಿಥಿಯಾದ ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜರವರು ಮಾತನಾಡುತ್ತಾ,ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ವಿಲೀನೀಕರಣದ ಹೆಸರಿನಲ್ಲಿ ಸರ್ವ ನಾಶ ಮಾಡುವ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.ವಿಮಾ ಕ್ಷೇತ್ರದಲ್ಲೂ ೧೦೦%ದಷ್ಟು ವಿದೇಶೀ ನೇರ ಹೂಡಿಕೆಯನ್ನು ಮಾಡಿ ವಿದೇಶೀ ವಿಮಾ ಸಂಸ್ಥೆಗಳಿಗೂ ಮುಕ್ತ ಅವಕಾಶ ನೀಡಿದೆ ಎಂದು ಹೇಳಿದರು.
ಬ್ಯಾಂಕ್ ನೌಕರರ ರಾಜ್ಯ ಮುಖಂಡರಾದ ಬಿ ಎಂ ಮಾಧವರವರು ಮಾತನಾಡಿ, ಕಳೆದ ೧೨ ವರ್ಷಗಳಲ್ಲಿ ದೇಶದ ಸಂಪತ್ತನ್ನು ಅಂಬಾನಿ ಅಧಾನಿಗಳು ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಗೆ ಮಾರಾಟ ಮಾಡುವ ಮೂಲಕ ಇಡೀ ದೇಶವನ್ನೇ ಅಂಬಧಾನಿ ಮಾಡಲು ಹೊರಟಿದೆ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಅIಖಿU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,ದೇಶದ ೭೦%ಕ್ಕಿಂತಲೂ ಹೆಚ್ಚಿನ ಕಾರ್ಖಾನೆಗಳು ಕಾರ್ಮಿಕ ಸಂಹಿತೆಗಳಿಂದ ಹೊರಗುಳಿಯುವ ಮೂಲಕ ೯೦% ದಷ್ಟು ಕಾರ್ಮಿಕರು ಯಾವುದೇ ಕಾನೂನಿನ ರಕ್ಷಣೆಯಿಲ್ಲದೆ ಬೀದಿಪಾಲಾಗಲಿದ್ದಾರೆ ಮಾತ್ರವಲ್ಲದೆ ಅವರನ್ನು ಗುಲಾಮರಂತೆ ದುಡಿಸಿ ಅವರ ಶ್ರಮವನ್ನು ದೋಚಲಾಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಅIಖಿU ಜಿಲ್ಲಾ ನಾಯಕರಾದ ಬಿ ಎಂ ಭಟ್, ವಸಂತ ಆಚಾರಿ,ಯೋಗೀಶ್ ಜಪ್ಪಿನಮೊಗರು, ವಸಂತಿ, ಲೋಲಾಕ್ಷಿ, ರೋಹಿದಾಸ್, ರವಿಚಂದ್ರ ಕೊಂಚಾಡಿ,ಜಯಲಕ್ಷ್ಮಿ, ಜಯಶ್ರೀ,ಂIಖಿUಅ ಜಿಲ್ಲಾ ಮುಖಂಡರಾದ ಸೀತಾರಾಮ ಬೇರಿಂಜ,ಬಿ ಶೇಖರ್,ವಿ ಕುಕ್ಯಾನ್,ಎಚ್ ವಿ ರಾವ್,ಸುಧಾಕರ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಪುರುಷೋತ್ತಮ ಪೂಜಾರಿ,ವಿಮಾ ನೌಕರರ ಸಂಘಟನೆಯ ನಾಯಕರಾದ ಬಿ ಎನ್ ದೇವಾಡಿಗ,ಅಲ್ಬನ್ ಮಸ್ಕರೇನಸ್,ವಸಂತ ಕುಮಾರ್, ಹೋಟೇಲ್ ನೌಕರರ ಸಂಘದ ನಾಯಕರಾದ ಮೋಹನ್,ಕಿರಣ್ ರಾಜ್,ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ,ಫ್ಲೇವಿಕ್ರಾಸ್ತಾ, ಯೋಗಿತಾ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಹಸನ್ ಕುದ್ರೋಳಿ,ಸಿಕಂದರ್,ಹಂಝ, ಗುಡ್ಡಪ್ಪ,ಶಿವಪ್ಪ,ನೌಷಾದ್,ವಿಜಯ,ಯುವಜನ ನಾಯಕರಾದ ಅಭಿಷೇಕ್, ವಿದ್ಯಾರ್ಥಿ ನಾಯಕರಾದ ವಿನುಷ ರಮಣ ಮುಂತಾದವರು ಉಪಸ್ಥಿತರಿದ್ದರು