Home ಜಿಲ್ಲೆ ಶ್ರೀಗಂಧ ಕಳ್ಳರ ಬಂಧನಕ್ಕೆ ಎಸ್ಪಿಗೆ ಮನವಿ

ಶ್ರೀಗಂಧ ಕಳ್ಳರ ಬಂಧನಕ್ಕೆ ಎಸ್ಪಿಗೆ ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.16: ಜಿಲ್ಲೆಯ ಕಂಪ್ಲಿ ತಾಲೂಕಿನ ಶ್ರೀರಾಮರಂಗಾಪುರಂ ಬಳಿಯ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಕದ್ದವರನ್ನು ಬಂಧಿಸಲು ಎಸ್ಪಿ ಸುಮನ್ ಪೆನ್ನೇಕರ್ ಅವರಿಗೆ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ಮನವಿ ಸಲ್ಲಿಸಿದ್ದಾರೆ.

ಈ ಸಂಘ ಕರ್ನಾಟಕದಾದ್ಯಂತ ನೆಲೆಸಿರುವ ಶ್ರೀಗಂಧ ಬೆಳೆಗಾರರು ಮತ್ತು ವನಕೃಷಿಕರ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.

ಕುಡಿತಿನಿ ಠಾಣಾ ವ್ಯಾಪ್ತಿಯಲ್ಲಿ. ಶ್ರೀರಾಮರಂಗಾಪುರ ಗ್ರಾಮದ  ಸುರೇಶ ಬಾಬು ಅವರ ಜಮೀನಿನಲ್ಲಿನ  5 ಶ್ರೀಗಂಧದ ಮರಗಳನ್ನು ಪೂರ್ಣವಾಗಿ ಕತ್ತರಿಸಿ ಕಳುವು ಮಾಡಿದ್ದು, 30 ಮರಗಳನ್ನು ಅರ್ಧಕ್ಕೆ, ಕತ್ತರಿಸಿ ಬಿಟ್ಟು ಹೋಗಿದ್ದಾರೆ. ಇವುಗಳ  ಮೌಲ್ಯ ರೂ 165000 ಗಳಾಗಿದೆ.

ಹಂಪಿ ಪೋಲಿಸ್  ಠಾಣೆಯಲ್ಲಿ ನವೆಂಬರ್ 2023 ರಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಇಬ್ಬರು ಕದ್ದ ಮಾಲು ಸ್ವೀಕರಿಸಿದ ಆರೋಪಿತರನ್ನು ದಸ್ತಗಿರಿ ಮಾಡುವುದು ಬಾಕಿ ಇದೆ.

ಹೊಸಪೇಟೆ ನಗರ ಠಾಣೆಯಲ್ಲಿ ಆರು ಜನ ಆರೋಪಿತರು. ( ಈ ಪ್ರಕರಣದಲ್ಲಿ ಎರೆಡು ಜನ ಶ್ರೀಗಂಧ ಕದ್ದ ಮಾಲನ್ನು ಖರೀದಿಸಿದ ಆರೋಪಿತರು ಕೇರಳ ಮೂಲದವರನ್ನು ದಸ್ತಗಿರಿ ಮಾಡಿದೆ ಹೀಗೆ ಅನೇಕ ಪ್ರಕರಣಗಳು ನಡೆದಿವೆ.

ಮರಗಳ ಬಗ್ಗೆ ಮಾಹಿತಿ ನೀಡುವ, ಮರ ಕದಿಯುವ, ಕದ್ದ ಮರಗಳನ್ನು ಸಾಗಾಟ ಮಾಡುವ, ಕದ್ದ ಮರವನ್ನು ಖರೀದಿ ಮಾಡುವ, ಅಲ್ಲದೇ ಕದ್ದ ಮರದಿಂದ ಮೌಲ್ಯವರ್ಧನೆ ಮಾಡಿ ಲಾಭ ಪಡೆಯುವ ಕಾರ್ಖಾನೆಯವರೆಗೂ ಎಲ್ಲಾ ಹಂತಗಳಲ್ಲೂ ತಂಡ ವ್ಯವಸ್ಥಿತವಾಗಿ ತೊಡಗಿಕೊಂಡಿದೆ

ಶ್ರೀಗಂಧದ ಕಳ್ಳತನಗಳು ದಶಕಗಳಷ್ಟು ಹಳೆತಾದರೂ, ಯಾವುದೇ ಸರ್ಕಾರ ನಿರ್ಧಿಷ್ಟ ಮತ್ತು ನಿಕೃಷ್ಟ ಕ್ರಮ ತೆಗೆದುಕೊಳ್ಳದಿರುವುದು ಕಳ್ಳತನಗಳ ಹೆಚ್ಚಳಕ್ಕೆ ಇಂಬು ನೀಡಿದೆ.

ಈ ವೇಳೆ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ, ಮಾಗರಾಜ ಕೆ.ಎಂ. ಕೊಳಗಲ್ಲು, ಲಿಂಗಾರೆಡ್ಡಿ ಯರಗುಡಿ, ಶರಣಬಸಂಪ್ಪ ಬಾದನಹಟ್ಟಿ, ಮಾಗರಾಜ, ಹನುಮನಗೌಡ, ರುದ್ರಪ್ಪ, ಪ್ರಕಾಶ್ ಬಾಬು, ಕರಿಬಸಪ್ಪ ಮೊದಲಾದವರು ಇದ್ದರು.